ತ್ರಿವರ್ಣ ಧ್ವಜದ ಮೇಲೆ ಭಗವಾಧ್ವಜ: ಸಚಿವ ನಾಗೇಶ್ ವಿರುದ್ಧ ಧ್ವಜಸಂಹಿತೆಯಡಿ ಕೇಸ್ ಹಾಕುವಂತೆ ಬಿ.ಕೆ ಹರಿಪ್ರಸಾದ್ ಆಗ್ರಹ

Update: 2022-08-11 18:36 GMT

ಬೆಂಗಳೂರು, ಆ.11: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಭಗವಾಧ್ವಜ ಹಿಡಿದುಕೊಂಡಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಹರಿಪ್ರಸಾದ್,  ''ತ್ರಿವರ್ಣ ಧ್ವಜದ ಮೇಲೆ ಯಾವ ಧ್ವಜವನ್ನೇ ಹಾರಿಸುವುದು ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆ.! ಶಿಕ್ಷಣ ಸಚಿವರಿಗೆ ಕನಿಷ್ಟ ಕಾನೂನಿನ ತಿಳುವಳಿಕೆ ಇಲ್ಲದೆ, ಭಗವಾಧ್ವಜವನ್ನ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಿಡಿದುಕೊಂಡು ಅಪರಾಧ ಮಾಡಿದ್ದಲ್ಲದೇ RSS ಮನಸ್ಥಿತಿಯನ್ನ ತೋರಿಸಿದ್ದಾರೆ. ಕೂಡಲೇ ಸಚಿವ ಬಿ.ಸಿ ನಾಗೇಶ್ ಮೇಲೆ ದ್ವಜಸಂಹಿತೆಯಡಿ ಕೇಸ್ ಹಾಕಬೇಕು'' ಎಂದು ಒತ್ತಾಯಿಸಿದ್ದಾರೆ. 

ಇದನ್ನೂ ಓದಿ:  ಎಸಿಬಿ ರಚನೆ ಆದೇಶ ರದ್ದುಪಡಿಸಿದ ಹೈಕೋರ್ಟ್

'ಸ್ವಾತಂತ್ರ್ಯದ ಅಮೃತ ಮಹೋತ್ಸವ' ಅಂಗವಾಗಿ ತಿಪಟೂರು ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ವತಿಯಿಂದ ಬುಧವಾರ ಆಯೋಜಿಸಲಾಗಿದ್ದ 'ತಿರಂಗ ಯಾತ್ರೆ'ಯಲ್ಲಿ ಸಚಿವ ನಾಗೇಶ್ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಗವಾಧ್ವಜವನ್ನ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಿಡಿದುಕೊಂಡಿರುವುದು ವೈರಲ್ ಆಗುತ್ತಿರುವ ಚಿತ್ರಗಳಲ್ಲಿ ಕಾಣಿಸುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News