ಮುಖ್ಯಮಂತ್ರಿ ಬದಲಾವಣೆ ಕಪೋಲಕಲ್ಪಿತ: ಸಿ.ಟಿ.ರವಿ

Update: 2022-08-11 15:04 GMT

ಚಿಕ್ಕಮಗಳೂರು, ಆ.11: ಮುಖ್ಯಮಂತ್ರಿ ಬದಲಾವಣೆ ಕಪೋಲಕಲ್ಪಿತ. ಮುಖ್ಯಮಂತ್ರಿಯಾಗಿ ಮೂರು ತಿಂಗಳಿಂದ ಹೇಳುತ್ತಿದ್ದಾರೆ. ಹಾಗಿದ್ದರೇ ಹತ್ತು ಬಾರೀ ಬದಲಾವಣೆಯಾಗಬೇಕಿತ್ತು. ಅಮಾವಾಸೆಗೆ ಹುಣ್ಣಿಮೆಗೆ ಯಾರ್ಯಾರಿಗೋ ಏನೇನೋ ಅನಿಸುತ್ತೆ, ಅವರೆಲ್ಲ ಸರಿ ಇದ್ದಾರೆ ಎಂದು ಹೇಳಲು ಆಗಲ್ಲ. ಅದು ಅವರಿಗಿರೋ ರೋಗ ಎಂದು ಹೇಳುವ ಮೂಲಕ ಶಾಸಕ ಸಿ.ಟಿ.ರವಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಬಂಧ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನ ಸಂಬಂಧ ನ್ಯಾಯಾಲಯದಲ್ಲಿ ಸರಕಾರಿ ಆಸ್ತಿ ಎಂದು ಘೋಷಣೆಯಾಗಿದೆ. ವಿವಾದದ ಪ್ರಶ್ನೆಯೇ ಇಲ್ಲ. ಗಣೇಶೋತ್ಸವಕ್ಕೆ ಅವಕಾಶ ಕೊಡಬೇಕೋ ಬಿಡಬೇಕೋ ಎನ್ನುವುದು ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ ಎಂದು ಝಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದರು.

ಗಣೇಶೋತ್ಸವ ಮಾಡಬೇಡಿ ಎಂದು ಹೇಳುವ ಅಧಿಕಾರ ಜಮೀರ್ ಅಹಮದ್‍ಗೆ ಯಾರಾದರೂ ಕೊಟ್ಟಿದ್ದಾರಾ? ಜಮೀರ್ ಅಹಮದ್ ವಿಶೇಷಾಧಿಕಾರಿನಾ ಎಂದು ಪ್ರಶ್ನಿಸಿದ ಅವರು, ಗಣೇಶೋತ್ಸವಕ್ಕೆ ಅವಕಾಶ ಕೊಡುವ ಬಗ್ಗೆ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಗಣೇಶೋತ್ಸವ ಎಲ್ಲರೂ ಸೇರಿ ಆಚರಿಸುವ ಹಬ್ಬ ಅದಕ್ಕೆ ಜಮೀರ್ ಅಹಮದ್ ಅಪ್ಪಣೆ ಪಡೆಯಬೇಕು ಎನ್ನುವುದೇ ದುರಾದೃಷ್ಟಕರ, ಹಬ್ಬ ಆಚರಣೆಗೆ ಬಿಡುವುದಿಲ್ಲ ಎನ್ನುವುದು ಜಮೀರ್ ಅಹಮದ್ ಅವರ ಅಸಹಿಷ್ಣುತೆಯ ಮನೋಸ್ಥಿತಿಯನ್ನು ತೋರಿಸುತ್ತದ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News