5 ವರ್ಷದ ಬಾಲಕಿಗೆ ಅವಮಾನ: ಶಿಕ್ಷಕಿಯ ವಿರುದ್ಧದ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ

Update: 2022-08-11 16:44 GMT

ಬೆಂಗಳೂರು, ಆ.11: ಬೆಂಗಳೂರಿನ ಖಾಸಗಿ ಶಾಲೆಯ ನರ್ಸರಿ ತರಗತಿಯಲ್ಲಿ ಓದುತ್ತಿದ್ದ ಐದು ವರ್ಷದ ಬಾಲಕಿಯನ್ನು ಅವಮಾನಗೊಳಿಸಿದ್ದ ಶಿಕ್ಷಕಿಯ ವಿರುದ್ಧದ ಕ್ರಿಮಿನಲ್ ಕೇಸ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. 

ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ಪ್ರಶ್ನಿಸಿ 41 ವರ್ಷದ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿದೆ.

ಶಿಕ್ಷಕಿಯು ಐದು ವರ್ಷದ ಬಾಲಕಿಯ ಪ್ಯಾಂಟ್ ಅನ್ನು ಎಳೆದು ಆ ಮಗು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಹೀಗಾಗಿ, ಆ ಶಿಕ್ಷಕಿ ಇದೀಗ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ. ಜೊತೆಗೆ ಇದು ಶಾಲೆಗಳಲ್ಲಿ ಮಕ್ಕಳನ್ನು ದಂಡಿಸುವ, ಟೀಸ್ ಮಾಡುವ ಶಿಕ್ಷಕರಿಗೆ ಎಚ್ಚರಿಕೆ ಗಂಟೆಯಾಗಿದೆ. ಶಿಕ್ಷಕರು ಅನಗತ್ಯವಾಗಿ ಮಕ್ಕಳನ್ನು ತೀವ್ರತರನಾದ ಶಿಕ್ಷೆಗೆ ಗುರಿ ಪಡಿಸಬಾರದು ಎಂದು ನ್ಯಾಯಪೀಠವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News