ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಲೋಕಾಯುಕ್ತ ಸಂಸ್ಥೆಗೆ ಬೆಂಬಲ ನೀಡುತ್ತಿಲ್ಲ: ಹೈಕೋರ್ಟ್ ಅಸಮಾಧಾನ

Update: 2022-08-11 17:47 GMT

ಬೆಂಗಳೂರು, ಆ.11: ಭಾರತಕ್ಕೆ ಸ್ವಾತಂತ್ರಂತ್ರ್ಯ ಬಂದು ಇದೇ 15ಕ್ಕೆ ಸರಿಯಾಗಿ 75 ವರ್ಷಗಳಾದರೂ ಕರ್ನಾಟಕ ಲೋಕಾಯುಕ್ತ ಎನ್ನುವಂತಹ ಸ್ವತಂತ್ರ ಸಂಸ್ಥೆಯನ್ನು ಬೆಂಬಲಿಸುವ ಆಸಕ್ತಿಯನ್ನು ಯಾವುದೇ ರಾಜಕೀಯ ಪಕ್ಷ ಹೊಂದದಿರುವುದು ದುರದೃಷ್ಟಕರ ಎಂದು ಹೈಕೋರ್ಟ್ (High Court of Karnataka) ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಬೆಂಗಳೂರು ವಕೀಲರ ಸಂಘ, ಚಿದಾನಂದ ಅರಸ್, ಸಮಾಜ ಪರಿವರ್ತನಾ ಸಮುದಾಯ ಸೇರಿ ಒಟ್ಟು 15 ಅರ್ಜಿಗಳ(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, 289 ಪುಟಗಳ ತೀರ್ಪಿನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ. 

ಇದನ್ನೂ ಓದಿ:  ACB ರದ್ದು ವಿಚಾರ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ಏನು?

ರಾಜಕೀಯ ಪ್ರಭಾವಿಗಳನ್ನು, ದೊಡ್ಡ ದೊಡ್ಡ ಅಧಿಕಾರಿಗಳನ್ನು ಕಾರಾಗೃಹಕ್ಕೆ ಕಳುಹಿಸುವ ಮೂಲಕ ಕರ್ನಾಟಕ ಲೋಕಾಯುಕ್ತವೂ ದೇಶಕ್ಕೆ ಮಾದರಿಯಾಗಿತ್ತು ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News