×
Ad

ACB ರಚನೆ ಕರ್ನಾಟಕದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

Update: 2022-08-12 12:43 IST

ಬೆಂಗಳೂರು: 'ಲೋಕಾಯುಕ್ತವನ್ನು ನಾಶ ಮಾಡಲು ಸಿದ್ದರಾಮಯ್ಯ ಅವರು ವಿಧಾನಸಭೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಪ್ರಜಾಪ್ರಭುತ್ವದ ಕ್ರೂರ ಅಣಕ. ಇಷ್ಟರ ಮೇಲೂ ಅನ್ಯ ರಾಜ್ಯಗಳಲ್ಲಿ ಎಸಿಬಿ (ACB) ಇಲ್ಲವೇ ಎಂದು ಅವರು ಮಾಡಿಕೊಳ್ಳುವ ನಿರ್ಲಜ್ಜ ಸಮರ್ಥನೆ ಅಕ್ಷಮ್ಯ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ''ಎಸಿಬಿ ರಚಿಸಿ, ಲೋಕಾಯುಕ್ತದಿಂದ ಅಧಿಕಾರ ಕಿತ್ತುಕೊಂಡು ತನಿಖಾ ಸಂಸ್ಥೆಯನ್ನೇ ಹಲ್ಲಿಲ್ಲದ ಹಾವು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಎಸಿಬಿ ರಚನೆ ಕರ್ನಾಟಕದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ತಮ್ಮನ್ನು ರಕ್ಷಿಸಲು ಸಿದ್ದರಾಮಯ್ಯ ಹೆಣೆದ ಕುಟಿಲ ತಂತ್ರಕ್ಕೆ ನ್ಯಾಯಾಂಗ ಛಡಿಯೇಟು ನೀಡಿದೆ'' ಎಂದು ಹೇಳಿದೆ. 

'ಅರ್ಕಾವತಿ ರೀಡು ಪ್ರಕರಣವೂ ಸೇರಿದಂತೆ ಸಿದ್ದರಾಮಯ್ಯ ಕಾಲದ ಹಲವು ಭ್ರಷ್ಟಾಚಾರ ಪ್ರಕರಣಗಳು‌‌ ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಜೈಲು ಶಿಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಹಾಡಹಗಲೇ ಲೋಕಾಯುಕ್ತದ ಕಗ್ಗೊಲೆ ನಡೆಸಿದರು. ಹೈಕೋರ್ಟ್ ತನ್ನ ತೀರ್ಪಿನ ಮೂಲಕ ಸಿದ್ದರಾಮಯ್ಯ ಅವರಿಗೆ ಕಪಾಳ‌ಮೋಕ್ಷ ಮಾಡಿದೆ' ಎಂದು ಬಿಜೆಪಿ ಕಿಡಿಕಾರಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News