ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ

Update: 2022-08-12 13:48 GMT

ಬೆಂಗಳೂರು,ಆ.12: ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ದೇಶದ ಒಟ್ಟು 151 ಮಂದಿ ಪೊಲೀಸರಿಗೆ 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ. 

ಲೋಕಾಯುಕ್ತ ಎಸ್ಪಿ ಕೆ. ಲಕ್ಷ್ಮಿ ಗಣೇಶ್, ಹೆಸ್ಕಾಂ ಎಸ್ಪಿ ಶಂಕರ್ ಕೆ. ಮರಿಹಾಳ, ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್. ಗೌತಮ್, ಸಿಐಡಿ ಡಿವೈಎಸ್ಪಿ (ಕಲಬುರಗಿ) ಶಂಕರಗೌಡ ಪಾಟೀಲ ಹಾಗೂ ದಾವಣಗೆರೆ ಬಸವನಗರ ಠಾಣೆ ಇನ್‌ಸ್ಪೆಕ್ಟರ್ ಎಚ್. ಗುರು ಬಸವರಾಜ್ ಅವರು ವಿವಿಧ ಅಪರಾಧಗಳನ್ನು ಅತ್ಯುತ್ತಮವಾಗಿ ತನಿಖೆ ಮಾಡಿರುವ ಸಾಧನೆಗಾಗಿ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ:  ಜಾನ್ಸನ್&ಜಾನ್ಸನ್ ಬೇಬಿ ಪೌಡರ್‌ ಮಾರಾಟವನ್ನೇ ನಿಲ್ಲಿಸಲಿರುವ ಸಂಸ್ಥೆ: ಕಾರಣವೇನು ಗೊತ್ತೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News