‘ಆಳ್ಶಿರೆಡ್ಡೆ’ ಕೊಂಕಣಿ ಚಿತ್ರದ ಹಾಡು ಬಿಡುಗಡೆ

Update: 2022-08-13 12:18 GMT

ಉಡುಪಿ : ಸ್ಪಾರ್ಕಲ್ ಪ್ರೊಡಕ್ಷನ್ ನಿರ್ಮಾಣದ, ಆರ್‌ಆರ್ ಫಿಲ್ಮ್ ಇಂಟರ್‌ನ್ಯಾಶನಲ್ ಮತ್ತು ಯುಎನ್ ಸಿನೆಮಾಸ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಹಾಸ್ಯಭರಿತ ಹಾರರ್, ಕಾಮಿಡಿ ಕೊಂಕಣಿ ಚಲನ ಚಿತ್ರದ ಹಾಡನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸ ಲಾಯಿತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಗೋಡ್ವಿನ್ ಸ್ಪಾರ್ಕಲ್ ಮತ್ತು ಹೆರ ಪಿಂಟೋ, ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಕೊಂಕಣಿ ಮಾತನಾಡುವ ಪ್ರದೇಶಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲಾ ಗುತ್ತದೆ. ಆಗಸ್ಟ್ ಕೊನೆಯ ವಾರದಲ್ಲಿ ಮಂಗಳೂರು, ಉಡುಪಿ, ಗೋವಾ, ಬೆಂಗಳೂರು, ಮುಂಬಯಿ, ಯುಎಇನಲ್ಲಿ ಚಿತ್ರದ ಬಿಡುಗಡೆಗೆ ತಯಾರಿ ನಡೆದಿದೆ. ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು.

ಚಿತ್ರದ ಸಾಹಿತ್ಯ ವಿಲ್ಸನ್ ಕಟೀಲ್ ಬರೆದಿದ್ದು, ಹಾಡನ್ನು ಕುನಾಲ್ ಗಂಜವಾಲ, ಮೋಹಿತ್ ಚೌಹಾನ್, ಲವಿಟ ಲೋಬೊ ಹಾಡಿದ್ದಾರೆ. ಅವಿನಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಯತೀಶ್ ಪೂಜಾರಿ ಸಹಾಯಕ ನಿರ್ದೇಶನ ಮಾಡಿದ್ದಾರೆ. ಪ್ಯಾಟ್ಸನ್ ಪಿರೇರಾ ಸಂಗೀತ ಸಂಯೋಜನೆ ಮಾಡಿದ್ದು, ವಿಲಿಯಂ ಪಿಂಟೊ ಪದರೆಂಗಿ ಸಂಬಾಷಣೆ ರಚಿಸಿದ್ದಾರೆ.  ಪ್ರಜ್ವಲ್ ಸುವರ್ಣ, ಇರ್ಶನ್ ಅಲಿ ಛಾಯಾಗ್ರಹಣ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಪ್ಯಾಟ್ಸನ್ ಪಿರೇರಾ, ಕಲಾವಿದರಾದ ಹ್ಯಾನ್ಲಿ ವಿಶಾಲ್, ಸಂದೀಪ್ ಮಲಾನಿ, ಹಿನ್ನೆಲೆ ಸಂಗೀತ ಪ್ರಜೋತ್ ಡೇಸಾ, ಎಸ್‌ಎಫ್‌ಎಕ್ಸ್ ಲೋಯ್ ವ್ಯಾಲೆಂಟೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News