ಉಪ್ಪಿನಂಗಡಿ: ಎಸ್ಕೆಎಸ್ಸೆಸ್ಸೆಫ್ ವಿಖಾಯದಿಂದ ಸ್ವಚ್ಛತಾ ಶ್ರಮದಾನ

Update: 2022-08-13 17:42 GMT

ಉಪ್ಪಿನಂಗಡಿ: ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದಿಂದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಲುವಾಗಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರವನ್ನು ಶುಚಿಗೊಳಿಸುವ ಸ್ವಚ್ಛತಾ ಕಾರ್ಯಕ್ರಮ ಆ.13ರಂದು ನಡೆಯಿತು.

ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಆರೋಗ್ಯ ಕೇಂದ್ರದ ಸುತ್ತ ಭಾರೀ ಪ್ರಮಾಣದಲ್ಲಿ ಗಿಡಗಂಡಿಗಳು ಬೆಳೆದು ನಿಂತಿದ್ದವು. ಹೀಗಾಗಿ ಅವುಗಳನ್ನು ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್  ವಿಖಾಯ ತಂಡದ ಸುಮಾರು 44 ಮಂದಿ ಸದಸ್ಯರು ಬೆಳಿಗ್ಗಿನಿಂದ ಸಂಜೆಯ ತನಕ ಶ್ರಮದಾನದ ಮೂಲಕ ತೆಗೆದು ಶುಚಿಗೊಳಿಸಿದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ಸಂಚಾಲಕ ಸೆಯ್ಯದ್ ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ವಲಯ ಉಪಾಧ್ಯಕ್ಷ ಯೂಸುಫ್ ಹಾಜಿ ಪೆದಮಲೆ, ಮುನೀರ್ ಆತೂರು, ಹಮೀದ್ ಹನೀಫಿ, ಕೋಶಾಧಿಕಾರಿ ಝಕರಿಯಾ ಮುಸ್ಲಿಯಾರ್ ಆತೂರು, ಸಂಚಾಲಕರಾದ ಫಯಾಜ್ ಯು.ಟಿ., ರಶೀದ್ ಕರಾಯ, ಆತೂರು ವಲಯ ಉಪಾಧ್ಯಕ್ಷ ಸಿದ್ದಿಕ್ ಎನ್., ಕಾರ್ಯದರ್ಶಿ ಅಝೀಜ್ ಪಾಲೆತ್ತಡಿ, ಕುದ್ಲೂರು ಶಾಖೆಯ ಖಾದರ್, ನುಹುಮಾನ್ ಸುಲೈಮಾನ್, ತಸ್ಲೀಮ್, ರಶೀದ್ ಎವರೆಸ್ಟ್, ಶಫಿದ್ ಕುದ್ಲೂರು, ಶಫ್ರಿದ್ ನಿನ್ನಿಕಲ್, ಕುಂಡಾಜೆ ಶಾಖೆಯ ಕಾರ್ಯದರ್ಶಿ ಅಶ್ರಫ್ ಕುಂಡಾಜೆ, ಕರಾಯ ವಲಯ ಅಧ್ಯಕ್ಷ ಕೆ.ಎಂ. ಸಿದ್ದಿಕ್ ಫೈಝಿ,  ಖಾದರ್ ಬಂಗೇರುಕಟ್ಟೆ, ಅಬೂಬಕ್ಕರ್ ಮುಸ್ಲಿಯಾರ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News