ಜಾಹೀರಾತಿನಲ್ಲಿ ನೆಹರೂ ಫೋಟೋ ಹಾಕಬೇಕಾಗಿತ್ತು: ಸಚಿವ ಬಿ.ಸಿ. ಪಾಟೀಲ್

Update: 2022-08-15 09:34 GMT

ಚಿತ್ರದುರ್ಗ, ಆ.15: ರಾಜ್ಯ  ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ(Azadi Ka Amrit Mahotsav) ಅಂಗವಾಗಿ ಆಗಸ್ಟ್ 14ರಂದು  ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸಾವರ್ಕರ್(Savarkar) ಪೋಟೋ ಸೇರಿಸಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ(Jawaharlal Nehru) ಅವರನ್ನು ಕೈಬಿಟ್ಟಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಕೃಷಿ ಸಚಿವ ಬಿ. ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 

ಚಿತ್ರದುರ್ಗದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರಂಭದಲ್ಲಿ 'ನಾನು ಜಾಹೀರಾತನ್ನು ನೋಡಿಲ್ಲ, ಆದ್ದರಿಂದ ನನಗೆ ಅದರ ಬಗ್ಗೆ ಗೊತ್ತಿಲ್ಲ. ವಾರ್ತಾ ಇಲಾಖೆಗೆ ಈ ಪ್ರಶ್ನೆ ಕೇಳಬೇಕು' ಎಂದು ಹೇಳಿದ್ದಾರೆ.  ಬಳಿಕ ನೆಹರೂ ಫೋಟೊ ಹಾಕಬೇಕಾಗಿತ್ತೋ ಅಥವಾ ಕೈ ಬಿಟ್ಟಿದ್ದು ಸರಿಯಾ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ಹಾಕಬೇಕಾಗಿತ್ತು ಎಂದು ಹೇಳಿದ್ದಾರೆ. 

'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ರಾಜ್ಯದಲ್ಲಿ  1 ಕೋಟಿ, 10 ಲಕ್ಷ ತ್ರಿವರ್ಣ ಧ್ವಜವನ್ನು ಸರಕಾರವೇ ವಿತರಣೆ ಮಾಡಿದೆ. ಇದು ಬಿಜೆಪಿ ಸರಕಾರದ್ದು. ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕಾಂಗ್ರೆಸ್​ನಿಂದ ಕಲಿಬೇಕಿಲ್ಲ' ಎಂದು ಇದೇ ವೇಳೆ ಕಿಡಿಗಾರಿದರು.

ಸರ್ಕಾರ ನಡೀತಿಲ್ಲ, ಮ್ಯಾನೇಜ್ ಮಾಡ್ತಿದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ. ಸಿ. ಪಾಟೀಲ್, 'ಮಾಧುಸ್ವಾಮಿ ನಾಲಿಗೆ ನಾನಲ್ಲ, ನಾವು ಸರ್ಕಾರ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುತ್ತಾ ಇದ್ದಾರೆ' ಎಂದು ಹೇಳಿದರು. 

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ: ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News