ಸೆಕ್ಷನ್ 144 ಹಿನ್ನೆಲೆ; ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ನಾಳೆ (ಆ.16) ರಜೆ

Update: 2022-08-15 16:20 GMT
ಡಾ. ಆರ್ ಸೆಲ್ವಮಣಿ- ಜಿಲ್ಲಾಧಿಕಾರಿಗಳು

ಶಿವಮೊಗ್ಗ, ಆ.15: ನಗರದಲ್ಲಿ ಸೆಕ್ಷನ್ 144  ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ  ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ (ಮಂಗಳವಾರ) ರಜೆ ಘೋಷಿಸಲಾಗಿದೆ. 

ಇಂದು (ಸೋಮವಾರ) ಸ್ವಾತಂತ್ರ್ಯ ದಿನಾಚರಣೆಯ  ಪ್ರಯುಕ್ತ ನಗರದ ಅಮೀರ್ ಅಹಮದ್ ವೃತ್ತದಲ್ಲಿ ಹಾಕಿದ್ದ ಸಾವರ್ಕರ್ ಫೋಟೋ ಇರುವ ಬ್ಯಾನರ್ ವಿಚಾರದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ 144 ಸೆಕ್ಷನ್  ಜಾರಿಗೊಳಿಸಿ ಆದೇಶಿದ್ದಾರೆ. 

ಈ  ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ದಿನಾಂಕ 16/08/2022 ರಂದು ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ರಜೆ ಘೋಷಿಸಿದ್ದಾರೆ. 

 ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ರಜೆ :  ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೂಡ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ರಜೆ ಘೋಷಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಂದ ಪ್ರತಿ ದಿನ ಪ್ರಯಾಣಿಸುವ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ರಜೆ ಘೋಷಿಸಲಾಗಿದ್ದು, ಉಪನ್ಯಾಸಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


​ಸಾವರ್ಕರ್  ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಶಿವಮೊಗ್ಗ ನಗರ ಮತ್ತು ಭದ್ರಾವತಿ ನಗರದಲ್ಲಿ ಎರಡೂ ಕಡೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 8 ಕೆಎಸ್ ಆರ್ ಪಿ, 10 ಡಿಎಆರ್ ಮತ್ತು ಒಂದು ರ್ಯಾಪಿಡ್ ಆಕ್ಷನ್ ಫೊರ್ಸ್  ‌ತುಕಡಿ ನಿಯೋಜಿಸಲಾಗಿದೆ. ರಾತ್ರಿಗೆ ಇನ್ನೂ ಹೆಚ್ಚಿನ ಫೊರ್ಸ್ ನಗರಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ನಗರದಲ್ಲಿ ಅಂಗಡಿಗಳನ್ನ ಬಂದ್ ಮಾಡಲಾಗಿದೆ.

- ಡಾ.ಬಿ.ಎಂ ಲಕ್ಷ್ಮೀ ಪ್ರಸಾದ್, ಶಿವಮೊಗ್ಗ ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News