ಕಲಬುರಗಿ BJP ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಝೈದಿ ನೂತನ ಸದಸ್ಯೆ

Update: 2022-08-16 15:30 GMT
(ಸೈಯದಾ ನೂರ್ ಫಾತಿಮಾ ಝೈದಿ - ನೂತನ ಕಾರ್ಪೊರೇಟರ್ )

ಕಲಬುರಗಿ, ಆ. 15: ಇತ್ತೀಚೆಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (Kalaburagi) ಸುಳ್ಳು ಮಾಹಿತಿ ನೀಡಿ ಸ್ಪರ್ಧಿಸಿ ಜಯಗಳಿಸಿದ ಅಭ್ಯರ್ಥಿಯೋರ್ವರ ಸದಸ್ಯತ್ವ ರದ್ದು ಪಡಿಸಿ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ಪ್ರಕಾರ 3ನೇ ಹೆಚ್ಚುವರಿ ನ್ಯಾಯಲಯ ಆದೇಶ ಹೊರಡಿಸಿದೆ.

ಸುಳ್ಳು ಮಾಹಿತಿ ನೀಡಿ  ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 24ಕ್ಕೆ ಬಿಜೆಪಿ (BJP) ಅಭ್ಯರ್ಥಿಯಾಗಿ ಪ್ರಿಯಾಂಕಾ ಅಂಬರೀಶ್ ಆಯ್ಕೆಯಾಗಿದ್ದರು. ಸುಳ್ಳು ದಾಖಲೆ ಸಲ್ಲಿಕೆ ಆರೋಪ ಸಾಬಿತಾಗಿರುವ ಹಿನ್ನೆಯಲ್ಲಿ ಅವರ ಸದಸ್ಯತ್ವವನ್ನು ರದ್ದು ಪಡಿಸಿ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ನಿಯಮದ ಪ್ರಕಾರ ಎರಡನೇ ಅಭ್ಯರ್ಥಿ (ಪಕ್ಷೇತರ) ಸೈಯದಾ ನೂರ್ ಫಾತಿಮಾ ಝೈದಿ ಪಾಲಿಕೆ ನೂತನ ಸದಸ್ಯತ್ವ ನೀಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ. 

ಸೈಯದಾ ನೂರ್ ಫಾತಿಮಾ ಝೈದಿ ಅವರು, ಈ ಸಂಬಂಧ ಆರ್ಟಿಐಯಡಿಯಲ್ಲಿ ಅರ್ಜಿ ಹಾಕಿದ್ದರು. ಬಳಿಕ ಆರ್ಟಿಐ ಮಾಹಿತಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. 

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರದೊಂದಿಗೆ ಕಲಬುರಗಿ ಮೇಯರ್ ಸ್ಥಾನವನ್ನು ವಶಪಡಿಸಿಕೊಳ್ಳುವ ವಿಶ್ವಾಸ ತೋರಿದ್ದ ಬಿಜೆಪಿಗೆ ಇದೀಗ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ:  RSSಗೆ ತಲೆಬಾಗುವುದಾದರೆ, ಮೊದಲು ಸಿಎಂ ಕುರ್ಚಿ ಖಾಲಿ ಮಾಡಿ: ಬೊಮ್ಮಾಯಿ ವಿರುದ್ಧ ಬಿ.ಕೆ ಹರಿಪ್ರಸಾದ್ ಆಕ್ರೋಶ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News