ಮರಳಿನ ಕೊರತೆ; ಹೆಚ್ಚು ಜಲ್ಲಿ ಕ್ರಷರ್​​ಗಳಿಗೆ ಅನುಮತಿ ನೀಡಲು ಚಿಂತನೆ: ಸಚಿವ ಹಾಲಪ್ಪ ಆಚಾರ್

Update: 2022-08-16 15:55 GMT
 ಹಾಲಪ್ಪ ಆಚಾರ್- ಸಚಿವರು

ಬೆಂಗಳೂರು, ಆ.16: ಮರಳಿನ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಜಲ್ಲಿ ಕ್ರಷರ್ ಗಳಿಗೆ ಅನುಮತಿ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಗಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ (Halappa Achar) ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ನೀತಿಗೆ ತಿದ್ದುಪಡಿ ತಂದು ಹೆಚ್ಚು ಜಲ್ಲಿ ಕ್ರಷರ್ ಗಳಿಗೆ ಅನುಮತಿ ನೀಡಿದರೆ, ಆ ಮೂಲಕ ಎಂ -ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಅಕ್ರಮ ಜಲ್ಲಿ ಕ್ರಷರ್ ಗಳ ಹಾವಳಿ ಕಡಿಮೆಯಾಗಲಿದೆ ಎಂದರು.

ರಾಜ್ಯದಲ್ಲಿಪ್ರತಿ ವರ್ಷ 45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಇದರಲ್ಲಿ 35 ಲಕ್ಷ ದಶಲಕ್ಷ ಟನ್‍ನಷ್ಟು ಬೇಡಿಕೆ ಎಂಸ್ಯಾಂಡ್‍ನಿಂದಪೂರೈಕೆಯಾಗುತ್ತಿದೆ. ಆದರೆ ಲಭ್ಯವಿರುವ ಮರಳಿನ ಪ್ರಮಾಣ ಐದು ದಶಲಕ್ಷ ಟನ್‍ಗಳಷ್ಟಿದ್ದು, ಇದರಿಂದಾಗಿ ಇನ್ನೂ ಐದು ದಶಲಕ್ಷ ಟನ್‍ಗಳಷ್ಟು ಮರಳಿನ ಕೊರತೆ ಇದೆ. ಈಗಲಭ್ಯವಾಗುತ್ತಿರುವ ಐದು ದಶಲಕ್ಷ ಟನ್ ಮರಳನ್ನು ಹಂಚಿಕೆ ಮಾಡಲು ಹಟ್ಟಿ ಮೈನ್ಸ್ ಮತ್ತು ಕೆ.ಎಸ್.ಎಂ.ಐ.ಎಲ್‍ಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  ಕಲಬುರಗಿ BJP ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಝೈದಿ ನೂತನ ಸದಸ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News