×
Ad

'ಕಾಂಗ್ರೆಸ್ ಹಡಗು ರಾಷ್ಟ್ರಮಟ್ಟದಲ್ಲೇ ಮುಳುಗಿ ಹೋಗುತ್ತಿದೆ': ಬಿಜೆಪಿ ಟೀಕೆ

Update: 2022-08-17 18:04 IST

ಬೆಂಗಳೂರು, ಆ. 17: ‘ಕಾಂಗ್ರೆಸ್ ಒಳಮನೆಯಲ್ಲಿ ನೂರಾರು ರಂದ್ರ! ಹೈಕಮಾಂಡ್ ವಿರುದ್ಧ ಜಿ-23 ಮುಖಂಡರು ಸದಾ ದಂಗೆ ಏಳುತ್ತಿದ್ದರೂ ಎದುರಿಸಲಾಗದ ಕಾಂಗ್ರೆಸ್ ಹಡಗು ರಾಷ್ಟ್ರಮಟ್ಟದಲ್ಲೇ ಮುಳುಗಿ ಹೋಗುತ್ತಿದೆ' ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಸದಾ ಚಾಲ್ತಿಯಲ್ಲಿರಲು ಕಾಂಗ್ರೆಸ್ ಲೆಕ್ಕ ಹಾಕಿದೆ. ಆದರೆ, ಒಂದೇ ತಿಂಗಳಲ್ಲಿ ಮೂವರು ನಾಯಕರು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದವರಂತೆ ಉತ್ಸವ, ನಡಿಗೆ ಹಾಗೂ ಪ್ರಚಾರ ಯಾತ್ರೆ ಆರಂಭಿಸಿದ್ದಾರೆ. ಮೊದಲು ಮನೆಯ ಜಗಳ ಬಗೆಹರಿಸಿಕೊಳ್ಳಿ, ನಂತರ ಜಗತ್ತಿನ ಸಮಸ್ಯೆ ಬಗ್ಗೆ ಮಾತನಾಡಿ' ಎಂದು ತಿರುಗೇಟು ನೀಡಿದೆ. 

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ‘ಸ್ವಾತಂತ್ರ್ಯದ ನಡಿಗೆ'ಯ ಉದ್ದೇಶ ಏನಾಗಿತ್ತು? ವಿಪಕ್ಷ ನಾಯಕ ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್ ಹಿರಿಯ ನಾಯಕರು ಡಿ.ಕೆ.ಶಿವಕುಮಾರ್ ಅವರ ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?' ಎಂದು ಬಿಜೆಪಿ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News