×
Ad

ಹಾಸನ | ನ್ಯಾಯಾಲಯದ ಆವರಣದಲ್ಲಿ ಮಹಿಳೆ ಹತ್ಯೆ ಪ್ರಕರಣ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Update: 2022-08-17 18:37 IST

ಹಾಸನ:  ಪತಿಯ ವಿರುದ್ಧ ನ್ಯಾಯ ಕೇಳಲು ಬಂದಿದ್ದ ಮಹಿಳೆಯನ್ನು ಹೊಳೆನರಸೀಪುರ ನ್ಯಾಯಾಲಯದ ಆವರಣದಲ್ಲೇ  ಪತಿಯು  ಹತ್ಯೆ ಮಾಡಿರುವುದು ಖಂಡನಿಯವಾಗಿದ್ದು, ಕೊಲೆಗಾರ ಆರೋಪಿಗೆ ಮರಣದಂಡನೆ ವಿಧಿಸುವಂತೆ ಮಹಿಳಾ ಜಾಗೃತಿ ಮಾರ್ಗದರ್ಶಿ ಅಧ್ಯಕ್ಷೆ ಕಲ್ಪನಾ ಕೀರ್ತಿ ಆಗ್ರಹಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಆಗಸ್ಟ್ 13 ರಂದು ಹೊಳೇನರಸೀಪುರದ 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯಕ್ಕೆ ತನ್ನ ಪತಿಯ ವಿರುದ್ಧ ನ್ಯಾಯಾ ಕೇಳಲು ಪ್ರಕರಣದ ಸಂಬಂಧದ ವಿಚಾರವಾಗಿ ನ್ಯಾಯಾಲಯಕ್ಕೆ ಬಂದು ವಾಪಸ್ ಹೋಗುವಾಗ ಆವರಣದಲ್ಲಿದ್ದ ಶಾಚಾಲಯಕ್ಕೆ ತೆರಳಿದಾಗ ಏಕಾಏಕಿ ಬಂದು ಒಂದು ಹೆಣ್ಣು ಎಂಬುದ ನೋಡದೇ ತನ್ನ ಕೈಲಿದ್ದ ಚಾಕುವಿನಿಂದ ಪತ್ನಿಯ ಕತ್ತು ಸೀಳಿದ್ದಾನೆ. ಯಾವುದೇ ಕಾನೂನಿನ ಭಯವಿಲ್ಲದೆ ಈ ರೀತಿಯ ಭೀಭಸ್ತ ಕೃತ್ಯವನ್ನು ಎಸಗಿ ಹತ್ಯೆಯನ್ನು ಮಾಡಿರುವುದು ಕಾನೂನಿಗೆ ಎಸೆದ ಸವಾಲಾಗಿರುತ್ತದೆ. ಈ ವಿಷಯದ ಬಗ್ಗೆ ಪೊಲೀಸ್ ಇಲಾಖೆಯವರು ಸಮಗ್ರ ತನಿಖೆಯನ್ನು ಮಾಡಿ ಆರೋಪ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿ, ಆನಂತರ ಘನ ನ್ಯಾಯಾಲಯವು ಅತೀ ಶೀಘ್ರವಾಗಿ ಪ್ರಕರಣವನ್ನು ವಿಚಾರಣೆ ಮಾಡಿ ಆರೋಪಿಗೆ ಮರಣ ದಂಡನೆಯೇ ಸೂಕ್ತವಾದ ಶಿಕ್ಷೆ ಎಂಬುದಾಗಿ ಪ್ರಕಟಿಸಬೇಕೆಂದು ಮಂಡ್ಯ ಜಿಲ್ಲಾ ಮಹಿಳಾ ಕೌಟುಂಬಿಕ ಕಾನೂನು ಸಲಹಾ ಸಂಸ್ಥೆಯ ಪದಾಧಿಕಾರಿಗಳು ಈ ಮೂಲಕ ತಮ್ಮಗಳಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.

ಮೃತರಾಗಿರುವ ಸೌಮ್ಯಗೆ ಎರಡು ಹೆಣ್ಣು ಮಕ್ಕಳಿದ್ದು, ಮುಂದಿನ ವಿದ್ಯಾಭ್ಯಾಸ ಹಾಗೂ ಅವರ ಶ್ರೇಯೋಭಿವೃದ್ಧಿಯ ಬಗ್ಗೆ  ಸರ್ಕಾರಕ್ಕೆ ಸಂಬಂಧ ಪಟ್ಟ ಇಲಾಖೆಯಿಂದ ಈ ಬಗ್ಗೆ ವರದಿಯನ್ನು ಸಲ್ಲಿಸುವ ಮೂಲಕ ಸಹಾಯ ಹಸ್ತವನ್ನು ನೀಡಬೇಕೆಂದು ಈ ಮೂಲಕ ನಮ್ಮ ಸಂಸ್ಥೆಯ ಪರವಾಗಿ ಒತ್ತಾಯಿಸುತ್ತೇವೆ. ಜೊತೆಗೆ ಇಂತಹದೆ ಹೋಲುವ ಘಟನೆ ಬೇಲೂರಿನಲ್ಲೂ ನಡೆದಿರುವುದು ಮಹಿಳೆಯರು ಭಯಭೀತರಾಗಿದ್ದಾರೆ. ಹೆಣ್ಣುಮಕ್ಕಳೆಂದರೇ ಯಾವ ರಕ್ಷಣೆ ಇಲ್ಲದಂತಾಗಿದೆ. ಕಠಿಣ ಕಾನೂನಿನ ಮೂಲಕ ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಇಂತಹ ತಪ್ಪು ಘಟನೆಗಳು ಮರುಕಳಿಸದಂತೆ ಮಾಡಬೇಕೆಂಬುದು ನಮ್ಮ ಮನವಿಯಾಗಿದೆ. ಇನ್ನು ಕೊಲೆ ಮಾಡಿದಂತಹ ಆರೋಪಿಗಳಿಗೆ ವಕೀಲರ ಸಂಘವು ಕೂಡ ಧೃಡ ನಿರ್ಧಾರ ಮಾಡಿ ಪರವಾದ ಕೇಸನ್ನು ಯಾರು ಪಡೆಯಬಾರದು. ಅಂತವರು ಹೊರ ಬಾರದಂತೆ ನ್ಯಾಯಾಧೀಶರು ಕೂಡ ತೀರ್ಪನ್ನು ಕೊಡಬೇಕಾಗಿದೆ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಮಹಿಳಾ ಕೌಟಂಬಿಕ ಕಾನೂನು ಸಲಹಾ ಸಂಸ್ಥೆಯ ರಜಿನಿ ರಾಜು, ಹಿರಿಯ ವಕೀಲರಾದ ದೊರೆಸ್ವಾಮಿ, ರಾಜ್ಯ ಒಕ್ಕಲಿಗರ ಕೆಂಪೇಗೌಡ ಯುವ ಸೇನೆಯ ಮಹಿಳಾ ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ಪ್ರತಿಮಾ, ಮಹಿಳಾ ಹೋರಾಟಗಾರ್ತಿ ಭವಾನಿ ಇತರರು ಉಪಸ್ಥಿತರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News