ಮಧುಗಿರಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರುವ ಫ್ಲೆಕ್ಸ್ ನಲ್ಲಿ ಗಾಂಧಿ ಹಂತಕ ಗೋಡ್ಸೆ ಭಾವಚಿತ್ರ

Update: 2022-08-17 14:29 GMT

ತುಮಕೂರು: ಮಧುಗಿರಿ ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರುವ ಫ್ಲೆಕ್ಸ್‌ ಒಂದರಲ್ಲಿ ನಾಥೂರಾಮ್ ಗೋಡ್ಸೆ ಚಿತ್ರ ಹಾಕಿರುವುದು ಬೆಳಕಿಗೆ ಬಂದಿದ್ದು, ಸದ್ಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಧುಗಿರಿಯ ಡಿ.ಎಂ ಬಡಾವಣೆಯ 'ಭಗತ್ ಸಿಂಗ್ ಯೂತ್ ಅಸೋಸಿಯೇಷನ್' ಹೆಸರಿನಲ್ಲಿ ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಸಮೀಪ ಹಾಕಲಾದ ಫ್ಲೆಕ್ಸ್ ನಲ್ಲಿ ಭಗತ್ ಸಿಂಗ್, ಸರ್ದಾರ್ ವಲ್ಲಭಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್, ಮಹಾತ್ಮಾ ಗಾಂಧೀಜಿ ಸೇರಿದಂತೆ ಕೆಲವು ಮಹನೀಯರ ಫೋಟೊ ಮಧ್ಯೆ ನಾಥೂರಾಮ್ ಗೋಡ್ಸೆ ಪೋಟೋ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

ಗಾಂಧೀಜಿ ಅವರ ಪೋಟೋಕಿಂತ ಮೇಲ್ಭಾಗದಲ್ಲೇ ಗೋಡ್ಸೆ ಪೋಟೋ ಹಾಕಿರುವುದು ಚಿತ್ರಗಳಲ್ಲಿ ಕಾಣಿಸುತ್ತದೆ. 

ಮಧುಗಿರಿ ಪುರಸಭೆಯಿಂದ ಅನುಮತಿ ಪಡೆಯದೇ ಪ್ಲೇಕ್ಸ್ ಹಾಕಲಾಗಿದೆ ಎಂದು ತಿಳಿದು ಬಂದಿದ್ದು,  ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗೋಡ್ಸೆ ಚಿತ್ರವಿರುವ ಈ ಫ್ಲೆಕ್ಸ್‌ ಫೋಟೊ ಹರಿದಾಡುತ್ತಿದ್ದಂತೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಫ್ಲೆಕ್ಸ್‌ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭದ್ರಾವತಿಯ ಗಲಾಟೆ ಕೋಮುಗಲಭೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಬಿಜೆಪಿಗೆ ಶಾಸಕ ಸಂಗಮೇಶ್ವರ್ ಸವಾಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News