ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗೂ ನೆಹರೂ ಕಾರಣವೇ: ಪ್ರಧಾನಿ ಮೋದಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-08-17 15:33 GMT

ಬೆಂಗಳೂರು, ಆ.17: 'ಕಾಶ್ಮೀರದಲ್ಲಿ ಪಂಡಿತರ ಹತ್ಯೆಗೆ ಅಂತ್ಯವೇ ಇಲ್ಲ. 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂದು ಮೋದಿ ಹೇಳುತ್ತಾರೆ. ಈಗ ಕಾಶ್ಮೀರದಲ್ಲಿ ಜನಪ್ರತಿನಿಧಿಗಳ ಸರಕಾರವಿಲ್ಲ. ಹಾಗಾದರೆ ಇಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೆ ಯಾರು ಹೊಣೆ ಮೋದಿಯವರೆ? ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗೂ ನೆಹರೂ ಕಾರಣವೇ'? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಕಾಶ್ಮೀರವನ್ನು ತೊರೆಯುವಂತೆ ಕಾಶ್ಮೀರ ಪಂಡಿತ ಸಂಘರ್ಷ ಸಮಿತಿ ಅಲ್ಲಿನ ಪಂಡಿತರಿಗೆ ಕರೆ ಕೊಟ್ಟಿದೆ. ಇದರರ್ಥವೇನು? ಮೋದಿ ಆಡಳಿತದಲ್ಲಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆಯಿಲ್ಲ ಎಂಬುದಲ್ಲವೆ? ಪಂಡಿತರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೋದಿಯವರಿಗೆ, ಅವರ ರಕ್ಷಣೆ ಮಾಡಲು ಯಾಕೆ ಸಾಧ್ಯವಿಲ್ಲ. ವೀರಾವೇಶದ ಮಾತುಗಳಿಂದ ಪಂಡಿತರ ರಕ್ಷಣೆ ಸಾಧ್ಯವೇ?' ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News