ರಿವಾಲ್ವಾರ್ ಇಲ್ಲದೆ ಬರೀ ಗುಂಡು ಹೊಂದುವುದು ಅಪರಾಧ ಕೃತ್ಯವಲ್ಲ: ಹೈಕೋರ್ಟ್

Update: 2022-08-17 15:40 GMT

ಬೆಂಗಳೂರು, ಆ.17: ರಿವಾಲ್ವಾರ್ (revolver) ಅಥವಾ ಪಿಸ್ತೂಲ್‍ನಂತಹ ಪೂರಕ ವಸ್ತುಗಳಿಲ್ಲದೆ, ಜೀವಂತ ಗುಂಡುಗಳನ್ನು ಹೊಂದಿರುವುದು ಅಥವಾ ಒಯ್ಯುವುದು ಭಾರತೀಯ ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಈ ಕೇಸ್‍ನ ವಿಚಾರಣೆ, ಪೊಲೀಸರು ದಾಖಲಿಸಿದ್ದ ಚಾರ್ಜ್‍ಶೀಟ್ ಪಟ್ಟಿಯನ್ನು ಪ್ರಶ್ನಿಸಿ ಜೋಸೆಫ್ ಫರ್ನಾಂಡೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.  

ನ್ಯಾಯಪೀಠವು, ಸಶಸ್ತ್ರ ಕಾಯ್ದೆಯ ಸೆಕ್ಷನ್ 45(ಡಿ) ಪ್ರಕಾರ ಪಿಸ್ತೂಲ್ ಅಥವಾ ರಿವಾಲ್ವಾರ್ ನಂತಹ ಅಸ್ತ್ರಗಳಿಲ್ಲದೇ ಹಾಗೂ ಬಳಸುವ ಉದ್ದೇಶವಿಲ್ಲದೇ ಸಶಸ್ತ್ರಗಳ ಸಣ್ಣ ಭಾಗಗಳನ್ನು ಹೊಂದಿದ್ದರೆ, ಅದು ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ. 

ಪತ್ತೆಯಾದ ಜೀವಂತ ಗುಂಡುಗಳಿಗೆ ಪೂರಕವಾಗಿ ಯಾವುದೇ ಪಿಸ್ತೂಲ್ ಅಥವಾ ರಿವಾಲ್ವಾರ್ ತೆಗೆದುಕೊಂಡು ಹೋಗುತ್ತಿರಲಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ಸಶಸ್ತ್ರ ಕಾಯ್ದೆಯಡಿ ವಿಚಾರಣೆ ನಡೆಸುವುದು ನ್ಯಾಯಯುತವಲ್ಲ ಎಂದು ಹೇಳಿ, ಜೆಎಂಎಫ್‍ಸಿ ಕೋರ್ಟ್ ವಿಚಾರಣೆ ರದ್ದುಪಡಿಸಿತು. ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಬ್ಯಾಗ್‍ನಲ್ಲಿ ಎರಡು ಜೀವಂತ ಗುಂಡು ಪತ್ತೆಯಾದ ಹಿನ್ನಲೆಯಲ್ಲಿ ಮಂಗಳೂರಿನ ಜೋಸೆಫ್ ಫರ್ನಾಂಡೀಸ್ ವಿರುದ್ಧ ಭಾರತೀಯ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News