ಸಹಕಾರ ಇಲಾಖೆಯಲ್ಲಿ ಸಚಿವ ಸೋಮಶೇಖರ್ ರಿಂದ 1500 ಕೋಟಿ ರೂ. ಸಂಪಾದನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

Update: 2022-08-17 17:50 GMT

ಮೈಸೂರು,ಆ.17: 'ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಇಲಾಖೆ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದಕ್ಕೆ ಅವರದೇ ಪಕ್ಷದ ಸಚಿವ ಮಾಧುಸ್ವಾಮಿ ಅವರು ಬೇಸರ ವ್ಯಕ್ತಪಡಿಸುತ್ತಾ ನಾವು ಸರಕಾರ ನೆಡೆಸುತ್ತಿಲ್ಲ, ಬದಲಾಗಿ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದರುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಳಿಗೆ ಎಡೆಮಾಡಿಕೊಟ್ಟಿದೆ' ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪಿಸಿದ್ದಾರೆ. 

ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, 'ಎಸ್.ಟಿ ಸೋಮಶೇಖರ್ ಮೈಸೂರು ಜಿಲ್ಲೆ ಉಸ್ತುವಾರಿ ವಹಿಕೊಂಡು ಏನು ಅಭಿವೃದ್ಧಿ ಮಾಡಿದ್ದಾರೆ? ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಅಂದಾಜು ಸುಮಾರು 1500 ಕೋಟಿಗೂ ಅಧಿಕ ದುಡ್ಡು ಮಾಡಿದ್ದಾರೆ. ಮತ್ತೊಬ್ಬ ಸಚಿವ ಸುಧಾಕರ್ ಕೂಡ ಎಸ್.ಟಿ ಸೋಮಶೇಖರ್ ಮಾಡಿರುವಷ್ಟೇ ಹಣ ಸಂಪಾದಿಸಿದ್ದಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇವರಿಬ್ಬರ ಜೊತೆಗೆ ಸಂಸದ ಪ್ರತಾಪ್ ಸಿಂಹ ಕೂಡ ರಿಯಲ್ ಎಸ್ಟೇಟ್ ಉದ್ಯಮದಿಂದ ಬಾರಿ ಪ್ರಮಾಣದ ಹಣಗಳಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು .

'ಆ.18 ರಂದು ಮುಖ್ಯಮಂತ್ರಿಳು ಮೈಸೂರಿಗೆ ಆಗಮಿಸುತ್ತಿದ್ದು, ಪ್ರವಾಹದಿಂದ ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಏನು ಪರಿಹಾರ ನೀಡಿದ್ದಾರೆ ಎಂದು ಹೇಳಬೇಕು. ನಾವು ನಡೆಸಿರುವ ಸಮೀಕ್ಷೆ ಪ್ರಕಾರ ಸುಮಾರು 10000 ಕೋಟಿ ಮನೆ ನಷ್ಟ ಉಂಟಾಗಿದ್ದರು ರಾಜ್ಯ ಸರ್ಕಾರ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ. ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿದಾಗ ಅವರು ಸಂಚರಿಸು ರಸ್ತೆಗಳ ಗುಂಡಿಗಳನ್ನು ಮುಚ್ಚಿದ್ದರು. ಆದರೇ ಅವರು ದೆಹಲಿಗೆ ತೆರಳುವ ಮುನ್ನವೇ ಮತ್ತೆ ಗುಂಡಿಯಾದವು' ಎಂದು ವ್ಯಂಗ್ಯವಾಡಿದರು.

ಪ್ರವೀಣಾ ನೆಟ್ಟಾರು ಹತ್ಯೆಗೆ  ಕಟೀಲ್ ಹೊಣೆ: 'ಇತ್ತೀಚೆಗೆ ಮಂಗಳೂರಿನ ಪ್ರವೀಣ್ ನಟ್ಟಾರು ಎಂಬ ಬಿಜೆಪಿ ಕಾರ್ಯರ್ಕರ ಹತ್ಯೆಯ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರು ಕಟೀಲ್ ಇರುವುದು ನೂರಕ್ಕೆ ನೂರು ಸತ್ಯ. ಹತ್ಯೆಯಾದ ಪ್ರವೀಣ್ ನೆಟ್ಟಾರು ಈ ಹಿಂದೆ ನಳೀನ್ ಕುಮಾರ್ ಕಟೀಲ್ ಅವರ ಕಾರು ಚಾಲಕರಾಗಿದ್ದ. ಒಂದು ವೇಳೆ ರಾಜ್ಯ  ಸರ್ಕಾರ ಈ ಪ್ರಕರಣದ ತನಿಖೆಯನ್ನು ರಾಜ್ಯ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ಗೆ ವಹಿಸಿದರೆ, ನಿಜ ಆರೋಪಿಗಳು ಬೆಳಕಿಗೆ ಬರುತ್ತಾರೆ' ಎಂದು ಹೇಳಿದರು. 

ಸಿದ್ದರಾಮ್ಮಯ್ಯ ಜಿಲ್ಲಾ ಪ್ರವಾಸ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆ.18 ರಿಂದ ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 8.30 ಕ್ಕೆ ಕೊಡುಗೆ ಜಿಲ್ಲೆಗೆ ಭೇಟಿ ನೀಡಿ ಬಳಿಕ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಲಿಗೆ ಭೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಜನರ ಸಮಸೆಗಳನ್ನ ಹಾಲಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ ಹಾಗೂ ರಾಮು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News