×
Ad

ಚಕ್ರವರ್ತಿ ಸೂಲಿಬೆಲೆ ಆಯುಧ ತರಬೇತಿ ನೀಡುತ್ತಿದ್ದಾರೆನ್ನಲಾದ ವೀಡಿಯೊ ವೈರಲ್:‌ ಹಲವರಿಂದ ಖಂಡನೆ

Update: 2022-08-19 18:28 IST

ಬೆಂಗಳೂರು: ಇತ್ತೀಚೆಗಷ್ಟೇ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಅಸಡ್ಡೆಯ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ಬಲಪಂಥೀಯ ಭಾಷಣಗಾರ ಚಕ್ರವರ್ತಿ ಸೂಲಿಬೆಲೆ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅನಧಿಕೃತವಾಗಿ ಶಸ್ತಾಸ್ತ್ರ ಅಭ್ಯಾಸಗಳನ್ನು ಸೂಲಿಬೆಲೆ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ʼಜೈ ಶಿವಾಜಿ, ಜೈ ಭವಾನಿʼ ಘೋಷಣೆಗಳನ್ನು ಕೂಗಿ ಬಂದೂಕಿನಂತೆ ಕಾಣುವ ಆಯುಧವನ್ನು ಹಿಡಿದಿರುವಂತಹ ಯುವಕರನ್ನು ಸೂಲಿಬೆಲೆ ಹುರಿದುಂಬಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಹಿಂದುತ್ವದ ನಶೆಯನ್ನು ಬಡ ಯುವಕರ ತಲೆಗೆ ತುಂಬಿಸಬೇಡಿ ಎಂದು ನೆಟ್ಟಿಗರು ಸೂಲಿಬೆಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ಸಿಗರು: ಶಾಸಕ ರೇಣುಕಾಚಾರ್ಯ

ಅಲ್ಲದೆ, ಅಕ್ರಮವಾಗಿ ಶಸ್ತ್ರ ಅಭ್ಯಾಸ ನೀಡುವ ಮೂಲಕ ಪರ್ಯಾಯ ಸೇನೆಯನ್ನು ಕಟ್ಟಿಕೊಳ್ಳುತ್ತಿರುವ ಸೂಲಿಬೆಲೆಯನ್ನು ರಾಷ್ಟ್ರೀಯ ಭದ್ರತೆ ಕಾಯ್ದೆ, ಯುಎಪಿಎ ಹಾಕಿ ಬಂಧಿಸುವಂತೆಯೂ ಆಗ್ರಹಗಳು ಕೇಳತೊಡಗಿವೆ. ನಿನ್ನೆಯಿಂದ ವೈರಲ್‌ ಆಗುತ್ತಿರುವ ಈ ವಿಡಿಯೋ ಎಲ್ಲಿಯದ್ದು?, ಮತ್ತು ಯಾವಾಗ ಚಿತ್ರೀಕರಿಸಲಾಯಿತು? ಎನ್ನುವ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 

ಈ ವೀಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಟ್ವಿಟರ್‌ ನಲ್ಲಿ ಹಲವು ಬಳಕೆದಾರರು #Arrestsulibele ಮತ್ತು #Arrestchakravarthysulibele ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಚಕ್ರವರ್ತಿ ಸೂಲಿಬೆಲೆಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News