×
Ad

ನನ್ನ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟಿಸಿದರೆ, ನಮ್ಮ ನಾಯಿಗಳು ಅವರನ್ನು ಸ್ವಾಗತಿಸುತ್ತದೆ: ಶಾಸಕ ಕೆ.ಜಿ. ಬೋಪಯ್ಯ

Update: 2022-08-19 20:21 IST

ಮಡಿಕೇರಿ ಆ.19 : 'ಕಾಂಗ್ರೆಸ್ಸಿಗರು ಆ.26 ರಂದು ಜನ ಸೇರಿಸಿ ಪ್ರತಿಭಟನೆ ಮಾಡಿ ವಾತಾವರಣ ಹಾಳು ಮಾಡಲು ನಾವು ಬಿಡುವುದಿಲ್ಲ, ಹಾಗೆ ಮಾಡಲು ಮುಂದಾದರೆ ನಾವೂ ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಡುತ್ತೇವೆ' ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಗಳ ಕಾರಿಗೆ ಮೊಟ್ಟೆ ಎಸೆದವರು ಬಿಜೆಪಿಯವರಲ್ಲ ಬದಲಾಗಿ ಕಾಂಗ್ರೆಸ್ ಕಡೆಯವರೇ ಎಂದು ಆರೋಪಿಸಿದರು.

ಆ.26 ರಂದು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಬರುವವರಿಗೆ ನಮ್ಮ ಮನೆ ನಾಯಿಗಳು ಅವರನ್ನು ಸ್ವಾಗತಿಸುತ್ತದೆ ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಡ್ಯ: ಮೊಟ್ಟೆ ತಿಂದು ಕಾಂಗ್ರೆಸ್, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಆ.26 ರಂದು ನಾವೂ ಪ್ರತಿಭಟನೆ ಮಾಡುತ್ತೇವೆ: ಶಾಸಕ ಅಪ್ಪಚ್ಚುರಂಜನ್ 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.26 ರಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸುತ್ತಾರಂತೆ, ಅವರು ಹೊರಗಿನಿಂದ ಜನರನ್ನು ಕರೆತರಲಿ, ನಾವು ಜಿಲ್ಲೆಯ ಮನೆ ಮನೆಗಳಿಂದ ಜನರನ್ನು ಸೇರಿಸಿ ಅಂದು ಪ್ರತಿಭಟನೆ ಮಾಡುತ್ತೇವೆ. 

- ಶಾಸಕ ಎಂ.ಪಿ.ಅಪ್ಪಚ್ಚು ರಂಜನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News