×
Ad

ಹಿಂದುತ್ವ ಸಂಘಟನೆಗಳಿಂದ ತಂದೆಗೆ ಜೀವ ಬೆದರಿಕೆ ಇದೆ: ಶಾಸಕ ಯತೀಂದ್ರ ಸಿದ್ದರಾಮಯ್ಯ

Update: 2022-08-19 20:46 IST

ಮೈಸೂರು, ಆ.19 : ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ  ತಂದೆ ಸಿದ್ದರಾಮಯ್ಯ ಅವರಿಗೆ ಹಿಂದುತ್ವ ಸಂಘಟನೆಗಳಿಂದಲೇ ಜೀವ ಬೆದರಿಕೆಗಳು ಬಂದಿವೆ ಎಂದು ಶಾಸಕ ಯತೀಂದ್ರ ಹೇಳಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, 'ಇದುವರೆಗೂ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಸರ್ಕಾರ ಈಗ ವಿರೋಧ ಪಕ್ಷದ ನಾಯಕರುಗಳಿಗೆ ಭದ್ರತೆ ಕೊಡಲು ಸಹ ವಿಫಲವಾಗಿದೆ. ಮಡಿಕೇರಿ ಪ್ರವಾಸದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಯುವಮೋರ್ಚಾ ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಕಾರಿಗೆ ಮೊಟ್ಟೆ ಎಸೆದು ಅಗೌರವ ತೋರಿದ್ದಾರೆ. ಇನ್ನು ಜನರ ರಕ್ಷಣೆ ದೇವರೇ ಗತಿ' ಎಂದು ಹೇಳಿದ್ದಾರೆ. 

ಇದನ್ನೂ ಓದಿ:  ನನ್ನ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟಿಸಿದರೆ, ನಮ್ಮ ನಾಯಿಗಳು ಅವರನ್ನು ಸ್ವಾಗತಿಸುತ್ತದೆ: ಶಾಸಕ ಕೆ.ಜಿ. ಬೋಪಯ್ಯ

'ಬಿಜೆಪಿ ಸರ್ಕಾರ ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ನಿಲ್ಲಿಸಬೇಕು. ವಿರೋಧ ಪಕ್ಷಗಳ ಸಣ್ಣ ಪುಟ್ಟ ಹೇಳಿಕೆಗಳನ್ನು ಹಿಡಿದುಕೊಂಡು, ಅನಗತ್ಯ ಗೊಂದಲ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವುದು ಉತ್ತಮ ಆಡಳಿತದ ಪಕ್ಷಣವಲ್ಲ. ಟೆರರಿಸ್ಟ್ ಗಳು ಕೂಡಾ ದೇಶ ಪ್ರೇಮಿಗಳೇ ಆಗಿರುತ್ತಾರೆ. ಆದರೆ ಅವರು ಹಿಡಿಯುವ ದಾರಿ ತಪ್ಪಲ್ವಾ? ಅದರಂತೆಯೇ ಸಾವರ್ಕರ್ ಕೂಡಾ ದೇಶ ಪ್ರೇಮಿಯೇ ಆಗಿರಬಹುದು. ಆದರೆ ಆ ದೇಶ ಪ್ರೇಮವನ್ನು ವ್ಯಕ್ತಪಡಿಸುವುದಕ್ಕೋಸ್ಕರ ಹಿಂದೂಯೇತರ ಪ್ರಜೆಗಳನ್ನು ದೇಶದ ಭಾಗವಾಗಿರಬಾರದು, ಅವರು ೨ನೇ ದರ್ಜೆಯ ಪ್ರಜೆಗಳಾಗಿರಬೇಕು ಹಾಗೂ ಅವರನ್ನು ದ್ವೇಷಿಸುವಂತೆ ಜನರಿಗೆ ಎತ್ತಿಕಟ್ಟುವುದು ಈ ದೇಶಕ್ಕೆ ಮಾರಕ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News