×
Ad

ನಮ್ಮದು ದಾಸೋಹ, ಬಿಜೆಪಿಯದ್ದು ಜನದ್ರೋಹ: ಕಾಂಗ್ರೆಸ್

Update: 2022-08-19 21:29 IST

ಬೆಂಗಳೂರು: '​'ಮೊಟ್ಟೆ'ಯನ್ನು ಎರಡು ಸರ್ಕಾರಗಳು ವಿಭಿನ್ನವಾಗಿ ಬಳಸಿಕೊಳ್ಳುತ್ತವೆ. ಕಾಂಗ್ರೆಸ್ ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ ಮತ್ತು ಶಾಲೆ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಮಾಡಿದರೆ,  ಬಿಜೆಪಿ ಸರ್ಕಾರ ಮೊಟ್ಟೆ ಖರೀದಿ ಟೆಂಡರ್‌ನಲ್ಲಿ ಕಮಿಷನ್ ಲೂಟಿ ಮಾಡಿದೆ ಮತ್ತು  ವಿಪಕ್ಷ ನಾಯಕರ ಮೇಲೆ ಮೊಟ್ಟೆ ದಾಳಿ ನಡೆಸಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.  

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ''40% ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ. PSI ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರದ ಕೂಪವಾಗಿರುವ KPSCಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ? ಇದರಲ್ಲೂ 40% ವಸೂಲಿ ನಡೆದಿರುವುದು ನಿಶ್ಚಿತ'' ಎಂದು ಕಾಂಗ್ರೆಸ್ ಆರೋಪ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News