ಸರ್ವ ಧರ್ಮೀಯ ವಿದ್ಯಾರ್ಥಿಗಳ ಆರ್ಥಿಕ ಸಹಾಯಕ್ಕೆ ‘ಶಾಹೀನ್ ಕಿಫಲ್ಹ್’

Update: 2022-08-22 11:10 GMT

ಬೆಂಗಳೂರು, ಆ.21: ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸಲು ‘ಶಾಹೀನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್' (SHAHEEN GROUP OF INSTITUTIONS) ವತಿಯಿಂದ ‘ಶಾಹೀನ್ ಕಿಫಲ್ಹ್’ ಅಭಿಯಾನ ಏರ್ಪಡಿಸಲಾಗಿದೆ.

ರವಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಹೀನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಸಿಇಒ ತೌಸೀಫ್ ಮಡಿಕೇರಿ, ‘ಆರ್ಥಿಕವಾಗಿ ಹಿಂದುಳಿದ ಅನೇಕ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಗೆ ದೂರ ಉಳಿಯುತ್ತಿದ್ದಾರೆ. ಈ ಬಗ್ಗೆ ನಾವು ಸಮೀಕ್ಷೆ ನಡೆಸಿದಾಗ ಮಕ್ಕಳು ಶಿಕ್ಷಣದಿಂದ ವಂಚಿತವಾಗಲೂ ಕುಟುಂಬದ ಆರ್ಥಿಕ ಪರಿಸ್ಥಿತಿಯೇ ಕಾರಣವೆಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ,  ಸಹಾಯ ಪಡೆಯುವ ಪ್ರತಿಯೊಂದು ಮಗುವಿಗೂ ಸ್ಪಂದಿಸಲು ಶಾಹೀನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ' ಎಂದರು.

‘ಶಾಹೀನ್ ಕಿಫಲ್ಹ್’ ಹೆಸರಿನ ಈ ಅಭಿಯಾನ ಇಂದಿನಿಂದ ಪ್ರಾರಂಭವಾಗಿದ್ದು, ಈ ಸಂಬಂಧ ವೆಬ್‍ಸೈಟ್‍ವೊಂದನ್ನು ಹೊರತರಲಾಗಿದೆ. ಆರ್ಥಿಕ ಸಹಾಯ ಪಡೆಯಲು ಇಚ್ಛಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶೈಕ್ಷಣಿಕ ಮತ್ತು ಕುಟುಂಬದ ಮಾಹಿತಿವೊಂದಿಗೆ ಅರ್ಜಿ ಸಲ್ಲಿಸಿದರೆ, ನಾವು ಅವರ ಸಹಾಯಕ್ಕೆ ಬರಲಿದ್ದೇವೆ' ಎಂದು ಅವರು ಹೇಳಿದರು.

‘ಕರ್ನಾಟಕ ಮಾತ್ರವಲ್ಲದೆ, ಈಡೀ ದೇಶದ ಯಾವುದೇ ಮೂಲೆಯಿಂದ ವಿದ್ಯಾರ್ಥಿಗಳು ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ, ಸ್ಥಳೀಯವಾಗಿರುವ ನಮ್ಮ ತಂಡವೇ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಪರಿಶೀಲನೆ ನಡೆಸಲಿದೆ.ಆನಂತರ, ಆ ವಿದ್ಯಾರ್ಥಿಯ ಆರ್ಥಿಕ ಸಹಾಯಕ್ಕೆ ನಾವು ಅಭಿಯಾನ ನಡೆಸಿ ಹಣ ಸಂಗ್ರಹ ಮಾಡಲಿದ್ದೇವೆ.ಇದರಿಂದ ವಿದ್ಯಾರ್ಥಿಯ ಭವಿಷ್ಯ ರೂಪಗೊಳ್ಳಲಿದೆ' ಎಂದು ಅವರು ವಿವರಿಸಿದರು.

‘ಈಗಾಗಲೇ 14ಕ್ಕೂ ಅಧಿಕ ವಿದ್ಯಾರ್ಥಿಗಳು ತಮಗೆ ಸಹಾಯಬೇಕೆಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಈ ನಿಟ್ಟಿನಲ್ಲಿ ನಾವು ಪರಿಶೀಲನೆ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದ ಅವರು, ಯಾವುದೇ ಸಮುದಾಯದ ವಿದ್ಯಾರ್ಥಿಯೂ ಆನ್‍ಲೈನ್ ಮೂಲಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಇದರಲ್ಲಿ ಯಾವುದೇ ಭೇದ-ಭಾವವಿಲ್ಲ' ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಹೀನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ನಿರ್ದೇಶಕ ಆಸೀಫ್ ಆಲಿ, ತುಮಕೂರಿನ ಶಾಹೀನ್ ಕಿಡ್ಸ್‍ನ ಉಮರ್ ಸೇರಿದಂತೆ ಪ್ರಮುಖರಿದ್ದರು.

ವೆಬ್‍ಸೈಟ್ ಮಾಹಿತಿ: https://shaheenkifalah.com/ ಹಾಗೂ ಮೊಬೈಲ್ ಸಂಖ್ಯೆ 8970973758

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News