×
Ad

‘ಮೈಸೂರು ಸ್ಯಾಂಡಲ್ ಸೋಪ್ಸ್' ಬ್ರ್ಯಾಂಡ್ ನೇಮ್ ಮನೆ ಮನೆಗೂ ತಲುಪಿಸಿ: ಸಿಎಂ ಬೊಮ್ಮಾಯಿ

Update: 2022-08-22 20:42 IST

ಬೆಂಗಳೂರು, ಆ. 22: ‘ಮೈಸೂರು ಸ್ಯಾಂಡಲ್ ಸೋಪ್ಸ್ ಅನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ. ಆದರೆ, ಈ ಬ್ರ್ಯಾಂಡ್ ನೇಮ್ ಅನ್ನು ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಸಲಹೆ ನೀಡಿದ್ದಾರೆ.

ಸೋಮವಾರ ‘ಕರ್ನಾಟಕ ಸೋಪ್ಸ್ ಅಂಡ್ ಡಿಟಜೆರ್ಂಟ್ಸ್ ಲಿಮಿಟೆಡ್(ಕೆಎಸ್ ಆಂಡ್ ಡಿಎಲ್) ವತಿಯಿಂದ ಆಯೋಜಿಸಿದ್ದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ‘ಶ್ರೀಗಂಧವನ’ ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಥೆಯಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ಮಾಡಲು ಅವಕಾಶವಿದೆ. ಕೆಎಸ್ ಆಂಡ್ ಡಿಎಲ್ ಕಾರ್ಯಚಟುವಟಿಕೆಗಳು, ಬಂಡವಾಳ, ಆಧುನಿಕ ಯಂತ್ರೋಪಕರಣ, ಆಕರ್ಷಕ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆಗಳು ದೊಡ್ಡ ಪ್ರಮಾಣದಲ್ಲಿ ಆಗಬೇಕು. ಈ ಉತ್ಪನ್ನಗಳ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ಅನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಚಿಂತನೆಯಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕು' ಎಂದು ಹೇಳಿದರು.

ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ: ‘ಶ್ರೀಗಂಧ ದ್ರವ ಹಾಗೂ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆಯಿದ್ದು, ದೊಡ್ಡ ಸಾಧನೆ ಮಾಡಲು ಸರಕಾರ ಎಲ್ಲ ಬೆಂಬಲ ನೀಡಲಿದೆ. ಆಧುನಿಕ ಯುಗದ ಮಾರುಕಟ್ಟೆ ಪೈಪೋಟಿಯನ್ನು ಎದುರಿಸಲು ತಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ಕೆಎಸ್ ಆಂಡ್ ಡಿಎಲ್‍ಗೆ ಇತಿಹಾಸವಿದ್ದು, ಭವ್ಯ ಭವಿಷ್ಯಕ್ಕಾಗಿ ಶ್ರಮವಹಿಸಬೇಕಿದೆ' ಎಂದು ಅವರು ನುಡಿದರು.

ಸುಗಂಧ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದೆ: ‘ಮೈಸೂರು ಸ್ಯಾಂಡಲ್ ಸೋಪ್ ಎಂದಾಕ್ಷಣ ಮನಸ್ಸಿಗೆ ಮುದ ನೀಡುವ ಸುವಾಸನೆ ನೆನಪಾಗುತ್ತದೆ. ಮನದಾಳದಲ್ಲಿ ಶ್ರೀಗಂಧದ ಸುಗಂಧವನ್ನು ಜನಮನದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದ ಶ್ರೇಯಸ್ಸು ಮೈಸೂರು ಸ್ಯಾಂಡಲ್ ಸೋಪ್ಸ್‍ಗೆ ಸಲ್ಲುತ್ತದೆ. ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳ ಬಗ್ಗೆ ನಮಗೆ ಅಭಿಮಾನವಿರಬೇಕು. ರಾಜ್ಯದಲ್ಲೇ ಸಂಶೋಧನೆಯಾಗಿ ತಯಾರಾಗಿರುವ ಈ ಉತ್ಪನ್ನ ಬ್ರ್ಯಾಂಡ್ ನೇಮ್ ಆಗಿ ಬೆಳೆದಿದ್ದರೂ, ಇದಕ್ಕೆ ಸೂಕ್ತ ಪ್ರಚಾರ ದೊರೆಯುತ್ತಿಲ್ಲ. ಈ ಉತ್ಪನ್ನಗಳ ತಯಾರಿಕೆಯಷ್ಟೇ, ಅವುಗಳ ಮಾರಾಟಕ್ಕೂ ಪ್ರಾಶಸ್ತ್ಯ ನೀಡಬೇಕು. ಸೋಪ್ ತಯಾರಿಕೆ, ವಾಣಿಜ್ಯ ಚಟುವಟಿಕೆಯಾಗಿದ್ದು, ಇದರಲ್ಲಿ ವೃತ್ತಿಪರತೆ ಇರಬೇಕು. ಕೆಎಸ್ ಆಂಡ್ ಡಿಎಲ್ ಲಾಭದಾಯಕ ಸಂಸ್ಥೆಯಾಗಿದ್ದು, ಇದಕ್ಕಾಗಿ ಎಲ್ಲ ಕಾರ್ಮಿಕರಿಗೂ ಅಭಿನಂದನೆಗಳು' ಎಂದು ಅವರು ತಿಳಿಸಿದರು.

ಧಾರವಾಡದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪಿಸಿದ್ದು, ಕೈಗಾರಿಕೆಗಳಿಗೆ ಹಲವು ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಉತ್ಪಾದಕ ವೆಚ್ಚ ಹಾಗೂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ ಹೀಗೆ ಅನೇಕ ಲಾಭಗಳನ್ನು ಕೆಎಸ್ ಆಂಡ್ ಡಿಎಲ್ ಸಂಸ್ಥೆ ಎಫ್‍ಎಂಸಿಜಿ ಕ್ಲಸ್ಟರ್‍ನಿಂದ ಪಡೆಯಹುದು. ಈ ಸೌಲಭ್ಯಗಳನ್ನು ಸರಕಾರಿ ಸ್ವಾಮ್ಯದ ಸಂಸ್ಥೆಗಳೂ ಪಡೆಯುವಂತೆ ಆಗಬೇಕು. ಎಫ್‍ಎಂಸಿಜಿ ಕ್ಲಸ್ಟರ್ ಕೆಎಸ್ ಆಂಡ್ ಡಿಎಲ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು.

ಬೆಂಗಳೂರಿನ ಕೆಎಸ್ ಆಂಡ್ ಡಿಎಲ್‍ನ ಉತ್ಪಾದನೆಯನ್ನು ಉನ್ನತೀಕರಿಸಿ, ಎಫ್‍ಎಂಸಿಜಿಯಲ್ಲಿ ನೀಡಲಾಗುವ ಎಲ್ಲ ರಿಯಾಯತಿ ಹಾಗೂ ಪ್ರೋತ್ಸಾಹಕಗಳನ್ನು ಇಲ್ಲಿನ ಉತ್ಪನ್ನಗಳಿಗೂ ನೀಡಲು ವಿಶೇಷ ಆದೇಶವನ್ನು ಮಾಡಲಾಗುವುದು. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೇರಿಸುವುದು ಹಾಗೂ ನಷ್ಟದಲ್ಲಿರುವ ಸಂಸ್ಥೆಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಮೂಲಕ ಪುನಶ್ಚೇತನ ಮಾಡಲಾಗುವುದು. ಪದ್ಮನಾಭ ಸಮಿತಿಯ ವರದಿಯಂತೆ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಲಾಭದಾಯಕ ಸಂಸ್ಥೆಗಳನ್ನಾಗಿಸಲು ಸರಕಾರ ಬದ್ಧವಾಗಿದೆ' ಎಂದು ಅವರು ಪ್ರಕಟಿಸಿದರು.

ಆವಿμÁ್ಕರ ಸೂಚ್ಯಂಕದಲ್ಲಿ ಕರ್ನಾಟಕ ನಂ.1: ‘ಕರ್ನಾಟಕ ರಾಜ್ಯಕ್ಕೆ ವಿದೇಶಿ ಬಂಡವಾಳ ಬರುತ್ತಿದೆ. ನೀತಿ ಆಯೋಗ ಆವಿμÁ್ಕರದಲ್ಲಿ ಕರ್ನಾಟಕ ನಂ.1 ಸ್ಥಾನ ಪಡೆದಿದೆ. 1.21 ಲಕ್ಷ ಕೋಟಿ ರೂ.ಗಳ ವಿದೇಶಿ ಬಂಡವಾಳಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಆರ್ ಆಂಡ್ ಡಿ, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿಗಳೆಲ್ಲವೂ ಅನುಷ್ಠಾನವಾಗುತ್ತಿದೆ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ, ಕೆಎಸ್ ಆಂಡ್ ಡಿಎಲ್‍ನ ಅಧ್ಯಕ್ಷ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಕೆಎಸ್ ಆಂಡ್ ಡಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.


ಶ್ರೀಗಂಧದ ನೀತಿ ಜಾರಿಗೆ: ‘ಹೊಸ ಉದ್ಯೋಗ ನೀತಿಯಂತೆ, ಹೆಚ್ಚು ಉದ್ಯೋಗ ನೀಡುವ ಉದ್ಯಮಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ 400 ಸಂಶೋಧನಾ ಕೇಂದ್ರಗಳಿವೆ. ಈ ನೀತಿಗಳಂತೆ ಕರ್ನಾಟಕದಲ್ಲಿ ಕೈಗಾರೀಕರಣ ಮಾಡಲಾಗುತ್ತಿದೆ. ಶ್ರೀಗಂಧದ ಕೃಷಿಯನ್ನು ಸರಳೀಕರಣಕ್ಕಾಗಿ ‘ಶ್ರೀಗಂಧ ನೀತಿ'ಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುವುದು'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News