ಶಿವಮೊಗ್ಗ | ಚಿರತೆ ಸೆರೆಗೆ ಸಕ್ರೆಬೈಲ್‌ ಶಿಬಿರದಿಂದ ಬೆಳಗಾವಿಯತ್ತ ಹೊರಟ 2 ಆನೆ

Update: 2022-08-23 14:39 GMT

ಶಿವಮೊಗ್ಗ, ಆ.23:  ಬೆಳಗಾವಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಇನ್ನೂ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿಕೊಂಡಿದ್ದು ಇದೀಗ ಚಿರತೆ (Leopard) ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ಹೊರಟಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ, ಇದೀಗ ಶಿವಮೊಗ್ಗದ ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ವಿಶೇಷ ತಂಡವೊಂದು ಬೆಳಗಾವಿಗೆ ತೆರಳಲು ಸಿದ್ಧವಾಗಿದೆ, ಇದರಲ್ಲಿ ಸಕ್ರೇಬೈಲು ಆನೆ ಬಿಡಾರದ ಅರ್ಜುನ ಹಾಗೂ ಆಲೆ ಆನೆಗಳೂ ಸೇರಿ ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಬೆಳಗಾವಿಗೆ ಹೊರಟಿದೆ.

ಇದನ್ನೂ ಓದಿ:  ಬೆಳಗಾವಿ ನಗರದ ಗಾಲ್ಫ್ ಕ್ಲಬ್ ಬಳಿ ಚಿರತೆ ಪ್ರತ್ಯಕ್ಷ: ನಗರದ ಜನರಲ್ಲಿ ಆತಂಕ

ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಅಲ್ಲದೆ ಸೋಮವಾರ ಮುಂಜಾನೆ ನಗರದ ಪ್ರಮುಖ ರಸ್ತೆಯಲ್ಲೇ ಸಂಚರಿಸಿ ಭೀತಿ ಹುಟ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News