ಹಾಸನ | ಗಿನ್ನೆಸ್ ರೆಕಾರ್ಡ್‍ಗಾಗಿ ತಲೆ ಕೂದಲನ್ನೇ ಬೋಳಿಸಿ ಎಣಿಕೆ ಮಾಡಿದ ಯುವಕ!

Update: 2022-08-23 14:39 GMT
 ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಸುರೇಶ್ ಬಾಬು

ಹಾಸನ, (Hassan) ಆ.23: ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಮಾಡಲೇಬೇಕು ಎನ್ನುವ ಹಠದಲ್ಲಿ ತನ್ನ ತಲೆ ಕೂದಲನ್ನೇ ಬೋಳಿಸಿ ಒಂದೊಂದು ಕೂದಲನ್ನು ಎಣಿಕೆ ಮಾಡಿರುವುದಾಗಿ ಎಸ್. ಸುರೇಶ್ ಬಾಬು ತಿಳಿಸಿದ್ದಾರೆ. 

ನಗರದಲ್ಲಿ  ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಬಾಬು, ಈ ಬಗ್ಗೆ ಮಾಹಿತಿ ನೀಡಿದರು.

'ನಾನು ಮೂಲತಃ ತುಮಕೂರು ಜಿಲ್ಲೆಯ ಪಾವಗಡದವನಾಗಿದ್ದು, ಪ್ರಸ್ತುತ ಹಾಸನ ನಗರದ ಹಳೇ ಪೋಸ್ಟ್ ಆಫೀಸ್ ಹತ್ತಿರ ಡಬಲ್ ಟ್ಯಾಂಕ್ ಸಮೀಪ ವಾಸವಾಗಿದ್ದು, ನಾನು ಗೃಹ ರಕ್ಷಕ ದಳದಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಚಿಕ್ಕಂದಿನಿಂದಲೂ ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದಾಗಿ ಜೂನ್ 23ರಂದು ನನ್ನ ತಲೆ ಕೂದಲನ್ನು ಬೋಳಿಸಿಕೊಂಡು ಕೂದಲು ಎಣಿಕೆ ಮಾಡಲು ಶುರು ಮಾಡಿದೆ. ತಲೆ ಕೂದಲು ಎಣಿಕೆಯನ್ನು ಇದುವರೆಗೂ ಯಾರು ಮಾಡಿರುವುದಿಲ್ಲ ಬಗ್ಗೆ ಯೂಟೂಬ್ ಇತರೆಗಳಲ್ಲಿ ಪರಿಶೀಲಿಸಿದ ನಂತರ ಈ ಸಾಹಸಕ್ಕೆ ಕೈಹಾಕಿದ್ದೇನೆ. ನನ್ನ ಈ ಪ್ರಯತ್ನಕ್ಕೆ ನಮ್ಮ ಮನೆಯವರ ಸಹಕಾರವಿದೆ' ಎಂದರು.

ಇದನ್ನೂ ಓದಿ: ಶಿವಮೊಗ್ಗ | ಚಿರತೆ ಸೆರೆಗೆ ಸಕ್ರೆಬೈಲ್‌ ಶಿಬಿರದಿಂದ ಬೆಳಗಾವಿಯತ್ತ ಹೊರಟ 2 ಆನೆ

'ಈ ರೀತಿ ಸಾಧನೆಯನ್ನು ಯಾರೂ ಮಾಡದೇ ಇದ್ದುದರಿಂದ ಇದನ್ನು ಮಾಡಬೇಕು ಎಂಬ ಆಸೆಯಿಂದಾಗಿ ಕಳೆದ 23 ದಿನಗಳಲ್ಲಿ ದಿನಕ್ಕೆ 10 ಗಂಟೆಯಂತೆ ಒಟ್ಟು 1 ಲಕ್ಷದ 382 ತಲೆ ಕೂದಲನ್ನು ಎಣಿಸಿದ್ದು, 101 ಡಬ್ಬಗಳಲ್ಲಿ ಎಣಿಕೆ ಮಾಡಿ ಇಟ್ಟದ್ದು, ಈ ಬಗ್ಗೆ ವಿಡಿಯೋಗಳಿದ್ದು, ಇವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‍ಗೆ  ಕಳುಹಿಸಿಕೊಡುವ ಆಲೋಚನೆ ಇದ್ದು, ಇದಕ್ಕೆ  ಸಂಬಂಧಿಸಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ನಾನು ಈ ಹಿಂದೆ ಒಂದು ಕೆ.ಜಿ. ರಾಗಿಯನ್ನು ಎಣಿಕೆ ಮಾಡಿದ್ದೆ. ಮುಂದಿನ ದಿನಗಳಲ್ಲಿ 20 ಕೆಜಿ ತೂಕದ ರಾಗಿಯನ್ನು ಎಣಿಕೆ ಮಾಡುವ ಗುರಿ ಹೊಂದಿದ್ದೇನೆ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News