ಬೇಂದ್ರೆ, ಮಾಸ್ತಿ, ಕಾರಂತ, ತೇಜಸ್ವಿ ಟ್ರಸ್ಟ್/ಪ್ರತಿಷ್ಠಾನಗಳ ಅಧ್ಯಕ್ಷ-ಸದಸ್ಯರ ನೇಮಕ ಆದೇಶ

Update: 2022-08-24 16:17 GMT

ಬೆಂಗಳೂರು, ಆ. 24: ರಾಜ್ಯ ಸರಕಾರದಿಂದ ರಚಿಸಲ್ಪಟ್ಟ ದ.ರಾ.ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಒಟ್ಟು 21 ಟ್ರಸ್ಟ್/ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೇಲ್ಕಂಡ ಟ್ರಸ್ಟ್/ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್-ಮನೋಜ ಪಾಟೀಲ್-ಧಾರವಾಡ ಅಧ್ಯಕ್ಷ, ಡಾ.ಪುತಿನಾ ಟ್ರಸ್ಟ್-ಡಾ.ಎಚ್. ಎಸ್.ವೆಂಕಟೇಶಮೂರ್ತಿ ಅಧ್ಯಕ್ಷ, ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್-ನಾಗರಾಜ ಹವಾಲದಾರ ಅಧ್ಯಕ್ಷ, ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ-ಡಾ.ವತ್ಸಲಾ ಮೋಹನ್ ಅಧ್ಯಕ್ಷೆ, ಡಾ.ಶಿವರಾಮ ಕಾರಂತ ಪ್ರತಿಷ್ಟಾನ ಉಡುಪಿ-ಆನಂದ ಸಿ.ಕುಂದರ್ ಅಧ್ಯಕ್ಷ, ಡಾ.ವಿ.ಕೃ.ಗೋಕಾಕ್ ಪ್ರತಿಷ್ಠಾನ ಹಾವೇರಿ-ಅನಿಲ್ ಗೋಕಾಕ್ ಅಧ್ಯಕ್ಷ, ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್-ಶ್ರೀಪಾದ ಹೆಗಡೆ ಅಧ್ಯಕ್ಷ.

ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್-ಡಾ.ಶ್ರೀನಿವಾಸ ಪಾಡಿಗಾರ ಅಧ್ಯಕ್ಷ, ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಬೆಳಗಾವಿ ಡಾ.ಕವಿತಾ ಕುಸಗಲ್ ಅಧ್ಯಕ್ಷರು, ಹುತಾತ್ಮ ಮೈಲಾರ ಮಹದೇವನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ-ಸುಧೀರ್ ಸಿಂಹ ಘೋರ್ಪಡೆ ಅಧ್ಯಕ್ಷ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ-ಡಾ.ಗುರುಪಾದ ಮರಿಗುದ್ದಿ ಅಧ್ಯಕ್ಷ, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್-ಪಿ.ಎಸ್.ಕಡೆಮನಿ ಅಧ್ಯಕ್ಷ, ಡಾ.ಡಿವಿಜಿ ಪ್ರತಿಷ್ಠಾನ ಕೋಲಾರ- ಎಸ್.ದಿವಾಕರ ಅಧ್ಯಕ್ಷ, ಪಿ.ಬಿ.ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ- ಶಿವಪ್ಪ ಭರಮಪ್ಪ ಅದರಗುಂಚಿ ಅಧ್ಯಕ್ಷ.

ಶ್ರೀ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನ ಹಾವೇರಿ-ಚಕ್ರವರ್ತಿ ಸೂಲಿಬೆಲೆ ಅಧ್ಯಕ್ಷ, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಮಂಡ್ಯ- ಡಾ.ಬಿ.ವಿ.ರಾಜರಾಮ್ ಅಧ್ಯಕ್ಷ, ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು-ಡಾ. ಬಸವರಾಜ ಕಲ್ಗುಡಿ ಅಧ್ಯಕ್ಷ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಿಕ್ಕಮಗಳೂರು- ನರೇಂದ್ರ ರೈ ದೇರ್ಲ ಅಧ್ಯಕ್ಷ, ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ- ಸರಸ್ವತಿ ಚಿಮ್ಮಲಗಿ ಅಧ್ಯಕ್ಷೆ, ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ ಬಾಗಲಕೋಟೆ- ಡಾ.ನೀಲಗಿರಿ ತಳವಾರ್ ಅಧ್ಯಕ್ಷರು, ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ತುಮಕೂರು-ಡಾ.ಭೀಮಸೇನ್ ಗಂಗಾವತಿ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಬುಧವಾರ ಆದೇಶ ಹೊರಡಿಸಿದ್ದಾರೆ.

ಮೃತರಿಗೂ ಪ್ರತಿಷ್ಠಾನದಲ್ಲಿ ಸ್ಥಾನ! 

‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಲೇಖಕ ನರೇಂದ್ರ ರೈ ದೇರ್ಲ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರ(ಮಹಿಳೆ)ನ್ನಾಗಿ ನೇಮಿಸಲಾಗಿದೆ. ಆದರೆ, ಅವರು 2021ರ ಡಿಸೆಂಬರ್ 14ರಂದು ನಿಧನರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿದೆ.

ಪ್ರತಿಷ್ಠಾನಕ್ಕೆ ಪ್ರಭುಲಿಂಗ ಶಾಸ್ತ್ರಿ, ದೀಪಕ್ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದ್ ಕುಮಾರ್ ನಾಯ್ಕ್, ಲಕ್ಷ್ಮಿ ನಾರಾಯಣ ಕಜಗದ್ದೆ, ಮಾರ್ಷಲ್ ಶರಾಮ್ ಹಾಗೂ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರಿನ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಸೂಲಿಬೆಲೆ

ಗಳಗನಾಥರ ಕುರಿತಂತೆ ಅಪಾರ ಗೌರವ ಹೊಂದಿರುವ ನನಗೆ, ನನ್ನನ್ನು ಗಳಗನಾಥ ಮತ್ತು ರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿಯೂ ಮತ್ತು ಸಂತಸವೂ ಆಯ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿಯೇ ಈ ಗೌರವವನ್ನು ಮರಳಿಸಬೇಕಾಗಿ ಬಂದಿದೆ. ಗಳಗನಾಥರ ಕುರಿತಂತೆ ನನ್ನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ನನ್ನ ದೃಷ್ಟಿಯಲ್ಲಿದ್ದಾರೆ. ಸಂಬಂಧಪಟ್ಟವರಿಗೆ ಅದನ್ನು ತಿಳಿಸುವೆ. ಸೂಕ್ತವೆನಿಸಿದರೆ ಅವರನ್ನು ಆಯ್ಕೆ ಮಾಡಬಹುದು. 

ಗಳಗನಾಥರ ಕನ್ನಡ ಸೇವೆಗೆ ನಾವೆಷ್ಟು ಋಣಿಯಾದರೂ ಕಡಿಮೆಯೇ. ಅವರ ಕೆಲಸ ಮಾಡುವ ಈ ಅವಕಾಶ ಸ್ವೀಕರಿಸಲಾಗದಿರುವುದಕ್ಕೆ ಖಂಡಿತವಾಗಿಯೂ ಖೇದವಿದೆ. ನನ್ನನ್ನು ಸೂಕ್ತವೆಂದು ಆಯ್ಕೆ ಮಾಡಿದವರಿಗೆ ಧನ್ಯವಾದಗಳು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News