×
Ad

ಕಮಿಷನ್‌ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿ ಸರ್ಕಾರ: ದಿನೇಶ್ ಗುಂಡೂರಾವ್ ಆರೋಪ

Update: 2022-08-25 16:03 IST

ಬೆಂಗಳೂರು: 'ಮೊದಲು 40% ಕಮಿಷನ್ ಇದ್ದದ್ದು ಈಗ 50% ಪರ್ಸೆಂಟ್ ಕಮಿಷನ್ ಆಗಿದೆ. ಕಮಿಷನ್‌ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿಯವರದ್ದು.‌ಇತ್ತೀಚೆಗೆ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಕಮಿಷನ್ ಪರ್ಸಂಟೇಜ್ ಜಾಸ್ತಿಯಾದಂತಿದೆ. ದೆಹಲಿಗೆ ಕಪ್ಪ ಕಾಣಿಕೆ ಸಲ್ಲಿಸಲು ಈ ಕಮಿಷನ್ ರೇಟ್ ಜಾಸ್ತಿಯಾಯಿತೆ.?' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಮುಂದಿನ ತಿಂಗಳು ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ಪ್ರತಿ ಸಲ ಅವರ ಬುರುಡೆ ಭಾಷಣ ಕೇಳಿ ಕೇಳಿ ಸಾಕಾಗಿದೆ. ಈ ಬಾರಿಯಾದರೂ 40% ಕಮಿಷನ್ 50% ಏರಿಕೆಯಾಗಿದ್ದು ಯಾಕೆ.? ಅದು ಯಾರ ಉದ್ಧಾರಕ್ಕೆ.? ಕಮಿಷನ್ ದಂಧೆಯಲ್ಲಿ BJP ನಾಯಕರಿಗೆ ಸಂದಾಯವಾಗುತ್ತಿರುವ ಪಾಲಿನ ಬಗ್ಗೆ ‌ಮೋದಿಯವರಿಂದ ಭಾಷಣ ಮಾಡಿಸಲು‌ ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ. 

'ಈ ಸರ್ಕಾರದ ಭ್ರಷ್ಟಾಚಾರದ ಕರ್ಮಕಾಂಡದ ಬಗ್ಗೆ ಮೊನ್ನೆಯಷ್ಟೇ ಹೈಕೋರ್ಟ್ ಚಾಟಿ ಬೀಸಿದೆ. ಇಷ್ಟದಾರೂ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಈ ಸರ್ಕಾರ‌ದ ನಡೆ ನೋಡಿದರೆ ಆಲಿಬಾಬ ಮತ್ತು 40 ಕಳ್ಳರ ಕಥೆ ನೆನಪಾಗುತ್ತದೆ. ಕಳ್ಳರು ಜನರಿಂದ ದೋಚಿದರೆ, ಆಲಿಬಾಬ ಕಳ್ಳರಿಂದ ದೋಚಿದಂತಾಗಿದೆ. ಆದರೆ ಇಲ್ಲಿ ಆ ಆಲಿಬಾಬ ಯಾರು ಎಂದು ಮೋದಿಯವರನ್ನೇ ಕೇಳಬೇಕು' ಎಂದು ಟ್ವೀಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News