ಮಡಿಕೇರಿ: ಕಾಡಾನೆ ದಾಳಿಯಿಂದ ಮನೆಗೆ ಹಾನಿ
Update: 2022-08-25 18:13 IST
ಮಡಿಕೇರಿ ಆ.25 : ಮದೆ ಗ್ರಾ.ಪಂ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮನೆ ಸೇರಿದಂತೆ ಬೆಳೆನಾಶಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಗ್ರಾಮದ ನಿವಾಸಿ ಚೆರಿಯಮನೆ ಬೆಳ್ಯಪ್ಪ ಎಂಬವರ ಮನೆಯ ಮೇಲೆ ಎರಡು ಕಾಡಾನೆಗಳು ದಾಳಿ ನಡೆಸಿದ್ದು, ಮನೆಯ ಗೋಡೆಯನ್ನು ಹೊಡೆದು ಮನೆಯವರ ಮೇಲೆ ದಾಳಿಸಲು ಮುಂದಾಗಿದೆ ಎನ್ನಲಾಗಿದೆ.
ಬೊಬ್ಬೆ ಹೊಡೆದು ಕಿರುಚಾಡಿದಾಗ ಆನೆಗಳು ತೆರಳಿದ್ದು, ತೋಟಕ್ಕೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮದೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ, ಸದಸ್ಯರಾದ ಚೆರಿಯಮನೆ ಚಂದ್ರಾವತಿ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.