×
Ad

ಚಿಕ್ಕಮಗಳೂರು; ಚಲಿಸುತ್ತಿದ್ದ ಬಸ್ಸಿನಿಂದ ಕಳಚಿ ಬಿದ್ದ ಹಿಂಬದಿ ಚಕ್ರ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Update: 2022-08-25 21:00 IST

ಚಿಕ್ಕಮಗಳೂರು, ಆ.25: ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸೊಂದರ ಹಿಂಬದಿಯಲ್ಲಿನ ಎರಡೂ ಚಕ್ರಗಳು ಕಳಚಿ ಬಿದ್ದಿದ್ದು, ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ಸಂಜೆ ತಾಲೂಕಿನ ಮಾಗಡಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ಹಾಸನ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಾಗಡಿ ಕೆರೆ ಮೇಲಿನ ರಸ್ತೆ ತಿರುವಿನಲ್ಲಿ ಚಲಿಸುತ್ತಿದ್ದ ವೇಳೆ ಬಸ್ಸಿನ ಹಿಂಬದಿಯ ಎರಡು ಚಕ್ರಗಳು ಏಕಾಏಕಿ ಕಳಚಿ ಬಿದ್ದಿವೆ. ವೇಗವಾಗಿ ಬರುತ್ತಿದ್ದ ಬಸ್ಸಿನ ಹಿಂಬದಿ ಚಕ್ರಗಳು ಕಳಚಿದ ಪರಿಣಾಮ ಬಸ್ ಸ್ಥಳದಲ್ಲೇ ನಿಂತಿದೆ. ಸ್ವಲ್ಪ ಮುಂದೇ ಚಲ್ಲಿಸಿದ್ದರೂ ಬಸ್ ಕೆರೆಗೆ ಬೀಳುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಯಾವ ಕಾರಣದಿಂದ ಹಿಂಬದಿಯ ಚಕ್ರ ಕಳಚಿಕೊಂಡಿದೆ ಎನ್ನುವುದು ತಿಳಿದು ಬರಬೇಕಿದೆ. 

ಇದನ್ನೂ ಓದಿ:  ಗೌರಿ ಗಣೇಶ ಹಬ್ಬ  ಹಿನ್ನೆಲೆ; ಕೆಎಸ್ಸಾರ್ಟಿಸಿಯಿಂದ 500 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ, ಶೇ.10ರಷ್ಟು ರಿಯಾಯಿತಿ

ಕೆಎಸ್ಸಾರ್ಟಿಸಿ ಸಂಸ್ಥೆ ಪ್ರಯಾಣಕ್ಕೆ ಯೋಗ್ಯವಲ್ಲದ ಬಸ್‍ಗಳನ್ನು ರಸ್ತೆಗಿಳಿಸುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಪ್ರಾಯಾಣಿಕರು ಮತ್ತು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News