ಶಿವಮೊಗ್ಗ: ಮೂವರು ರೌಡಿ ಶೀಟರ್ ಗಳ ಬಂಧನದ ಅವಧಿ ವಿಸ್ತರಣೆ

Update: 2022-08-27 05:24 GMT

ಶಿವಮೊಗ್ಗ, ಆ.26 : ಸಮಾಜಘಾತುಕ ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರುವ ಮೂವರು ರೌಡಿಗಳ ಬಂಧನ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶಿಸಿದೆ. 

ಟಿಪ್ಪುನಗರದ ಝಮೀರ್‌ ಅಲಿಯಾಸ್‌ ಬಚ್ಚಾ ಅಲಿಯಾಸ್‌ ಬಚ್ಚನ್‌(31), ಸೂಳೆಬೈಲು ನಿವಾಸಿ ಸಲೀಂ ಅಲಿಯಾಸ್‌ ಚೋರ್‌ ಸಲೀಂ (36), ಕಡೇಕಲ್‌ ನಿವಾಸಿ ಅಬೀದ್‌ ಖಾನ್‌ ಅಲಿಯಾಸ್‌ ಕಡೇಕಲ್‌ ಅಬೀದ್‌ (34) ಅವರುಗಳ ಬಂಧನದ ಅವಧಿಯನ್ನು 1 ವರ್ಷದವರೆಗೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.

ಬಚ್ಚನ್‌  ವಿರುದ್ಧ ಶಿವಮೊಗ್ಗ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 22 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ರೌಡಿಶೀಟ್‌ ಮತ್ತು ಎಂಒಬಿ ಕಾರ್ಡ್‌ಗಳನ್ನು ತೆರೆಯಲಾಗಿದೆ. ಈತನ ಮೇಲೆ ಮುಂಜಾಗ್ರತಾ ಕ್ರಮದ ಅಡಿ ಪ್ರಕರಣ ದಾಖಲಿಸಿ ಬಾಂಡ್‌ ಓವರ್‌ ಮಾಡಿದ್ದರೂ ಬಾಂಡ್‌ನ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿಕ ಕೃತ್ಯಗಳಲ್ಲಿಭಾಗಿಯಾಗಿರುತ್ತಾನೆ. ಈತನನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿ ಇಡುವಂತೆ  ಜಿಲ್ಲಾಧಿಕಾರಿ ಅವರು ಆದೇಶ ನೀಡುದ್ದಾರೆ. 

 ಆ.20ರಂದು ಗೂಂಡಾ ಕಾಯಿದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಬಚ್ಚನ್‌ನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ರಾಜ್ಯ ಸರಕಾರವು ಶುಕ್ರವಾರ ಜಿಲ್ಲಾಧಿಕಾರಿ ಅವರ ಆದೇಶವನ್ನು ಸ್ಥಿರೀಕರಿಸಿ, ಬಂಧನದ ಆದೇಶವನ್ನು ಜುಲೈ 15ರಿಂದ ಒಂದು ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News