ಕಮಿಷನ್ ದಂಧೆಯನ್ನೂ ಕೂಡಾ ಇವರು ದೇಶಭಕ್ತಿ ಎಂದು ವಾದಿಸಿದರೆ ಅಚ್ಚರಿ ಏನಿಲ್ಲ: BJP ವಿರುದ್ಧ ಎಚ್.ಸಿ ಮಹದೇವಪ್ಪ ಕಿಡಿ

Update: 2022-08-27 09:03 GMT

ಬೆಂಗಳೂರು: 'ಕಮಿಷನ್ ದಂಧೆಯನ್ನೂ ಕೂಡಾ ರಾಜ್ಯದಲ್ಲಿರುವ ಬಿಜೆಪಿ ಸರಕಾರ ದೇಶಭಕ್ತಿ ಎಂದು ವಾದಿಸಿದರೆ ಅದರಲ್ಲಿ ಅಚ್ಚರಿ ಏನಿಲ್ಲ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಗೆ ಬೇಸತ್ತು ಖಾಸಗಿ ಶಾಲೆಗಳ ಸಂಘವು ಪ್ರಧಾನಿಗೆ ಪತ್ರ ಬರೆದಿದೆ. ಶಾಲೆಗಳಿಂದಲೂ ಕಮಿಷನ್ ವಸೂಲಾತಿಗೆ ನಿಂತಿರುವ ಈ ಸರ್ಕಾರವು ಎಲ್ಲ ವಲಯಕ್ಕೂ ಕಮಿಷನ್ ಜಾಲವನ್ನು ವಿಸ್ತರಿಸುತ್ತಿದೆ' ಎಂದು ಆರೋಪಿಸಿದ್ದಾರೆ. 

ಆರ್‍ಟಿಇ ಅಡಿಯಲ್ಲಿ ಶುಲ್ಕವನ್ನು ಮರುಪಾವತಿ ಮಾಡಬೇಕಾದರೆ, ಶೇ.30 ರಿಂದ ಶೇ.40ರಷ್ಟು ಲಂಚವನ್ನು ನೀಡಬೇಕಾಗಿದೆ. ಸಾವಿರಾರು ಶಾಲೆಗಳು ಲಂಚವನ್ನು ನೀಡಲಾಗದೆ, ಆರ್ಟಿ ಇ ಶುಲ್ಕಕ್ಕೆ ಅರ್ಜಿ ಸಲ್ಲಿಸಲಾಗದೆ ಮೂಕವೇದನೆಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ  ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‍ಮೆಂಟ್ ಸಂಘ(ರೂಪ್ಸಾ) ಕರ್ನಾಟಕವು ಪ್ರಧಾನಿ ಮೋದಿಗೆ ಪತ್ರ ಬರೆದಿದೆ. 

ಇದನ್ನೂ ಓದಿ:  ಶಿಕ್ಷಣ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ: ಪ್ರಧಾನಿಗೆ ಪತ್ರ ಬರೆದ ರೂಪ್ಸಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News