×
Ad

ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ಧ ಪ್ರಕರಣ ದಾಖಲು

Update: 2022-08-27 16:22 IST

ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಬಸವರಾಜನ್ ಮತ್ತು ಪತ್ನಿ ಸೌಭಾಗ್ಯ ಅವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆಶ್ರಮದ ಮಹಿಳಾ ವಾರ್ಡನ್‌ ನೀಡಿರುವ  ದೂರಿನನ್ವಯ  ಪ್ರಕರಣ  ದಾಖಲಾಗಿದೆ.

ಆಡಳಿತಾಧಿಕಾರಿ ಬಸವರಾಜನ್ ಅವರು ಪರಿಶೀಲನೆ ನೆಪದಲ್ಲಿ ಕೊಠಡಿಗೆ ಪ್ರವೇಶಿಸಿ ಕಿರುಕುಳ ನೀಡುತ್ತಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ ಅವರು ಮನೆಗೆ ತೆರಳದೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಆದರೆ ಮಕ್ಕಳ ಸಂಬಧಪಟ್ಟವರಿಗೆ ಮಾಹಿತಿ ನೀಡದೇ ತನ್ನ ಮನೆಯಲ್ಲೇ ಅಕ್ರಮವಾಗಿ ಇರಿಸಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News