ಮಡಿಕೇರಿ: ಗದ್ದೆಯಲ್ಲಿದ್ದ ಕಾಳಿಂಗ ಸರ್ಪದ ರಕ್ಷಣೆ
Update: 2022-08-27 16:38 IST
ಮಡಿಕೇರಿ ಆ.27 : ಗದ್ದೆಯಲ್ಲಿದ್ದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಪೊನ್ನೀರ ಸ್ನೆಕ್ ಗಗನ್ ರಕ್ಷಿಸಿದ್ದಾರೆ.
ಚೇರಂಬಾಣೆಯ ಬಿ.ಬಾಡಗದ ಕೂಡಕಂಡಿ ಅಪ್ಪಣ್ಣ ಅವರ ಗದ್ದೆಯಲ್ಲಿ ಕಾಳಿಂಗ ಸರ್ಪ ಇರುವ ಬಗ್ಗೆ ಭಾಗಮಂಡಲದ ಅರಣ್ಯಾಧಿಕಾರಿ ಮಂಜುನಾಥ್ ನಾಯ್ಕ್ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ತಜ್ಞ ಪೊನ್ನೀರ ಸ್ನೇಕ್ ಗಗನ್ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣಾಧಿಕಾರಿಗಳ ನೆರವಿನಿಂದ ಪಟ್ಟಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಸ್ನೇಕ್ ಗಗನ್ ಇದುವರೆಗೆ 64 ಕಾಳಿಂಗ ಸರ್ಪ ಹಾಗೂ 8000 ಕ್ಕೂ ಅಧಿಕ ವಿವಿಧ ಹಾವುಗಳನ್ನು ರಕ್ಷಿಸಿದ್ದಾರೆ. ಹಾವುಗಳನ್ನು ಕಂಡರೆ ಕೊಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೆ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಗಗನ್ ತಿಳಿಸಿದರು.