×
Ad

ನನ್ನ ಮುಂದಿನ ರಾಜಕೀಯ ನಡೆ ನವೆಂಬರ್ ತಿಂಗಳಲ್ಲಿ ತೀರ್ಮಾನ: ಶಾಸಕ ಜಿ.ಟಿ.ದೇವೇಗೌಡ

Update: 2022-08-27 22:12 IST

ಮೈಸೂರು,ಆ.27: ರಾಜಕೀಯದಲ್ಲಿನ ತಮ್ಮ ಮುಂದಿನ ನಡೆಯನ್ನು ನವೆಂಬರ್ ತಿಂಗಳಿನಲ್ಲಿ ನಿರ್ಧರಿಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನಲ್ಲಿ ಶನಿವಾರ  ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಯಾರ ಜೊತೆಯೂ ಈ ಕುರಿತು ಚರ್ಚೆ ಮಾಡಿಲ್ಲ, 'ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಅಂತ ಹೇಳಿ ಜನರ ಜೊತೆ ಪ್ರಸ್ತಾಪ ಮಾಡಿಲ್ಲ. ಅಷ್ಟೊತ್ತಿಗೆ ಜಿಲ್ಲೆಯಲ್ಲಿರುವ ಜನರ ಜೊತೆ ಎಲ್ಲ ತಾಲೂಕುಗಳಲ್ಲಿ ನನಗೆ ಅಭಿಮಾನಿಗಳಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ನಿಮ್ಮ ಜೊತೆ ಮಾತನಾಡುತ್ತೇನೆ  ಅಂತ ಹೇಳಿದ್ದೇನೆ. ನಾನು ಯಾವತ್ತೂ ನೇರವಾಗಿ ಒಂದೇ ಒಂದು ದಿನ ಮಂತ್ರಿ ಮಾಡಿ ಅಂತ ಹೇಳಿಲ್ಲ. ಅಥವಾ ಜನರನ್ನು ಕಳಿಸಿಲ್ಲ. ಅವರೇ ಮಾಡಿದ್ದು, ಹರೀಶ್ ಗೌಡ ಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ನನಗೆ ಸುಳ್ಳು ಹೇಳಲು ಬರಲ್ಲ. ಮಾತನಾಡದೆ ದೂರ ಇದ್ದೇನೆ ಹೊರತು, ನಾನು ಅವರ ವಿರುದ್ಧ ಒಂದೇ ಒಂದು ಮಾತುಗಳನ್ನು ಆಡಿಲ್ಲ' ಎಂದು ಸ್ಪಷ್ಟಪಡಿಸಿದರು.

'ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿಯವರು ಭಾಗವಹಿಸಿದ್ದರು. ಡಿ.ಕೆ.ಶಿವಕುಮಾರ್ ಅವರೂ ಭಾಗವಹಿಸಿದ್ದರು. ಕುಮಾರಸ್ವಾಮಿಯವರು ಭಾಗವಹಿಸಿದ್ದರು. ಆ ಸಮಾರಂಭದಲ್ಲಿ ಸ್ವಾಮೀಜಿಯವರು ನೀವು ಇಷ್ಟು ವರ್ಷಗಳ ಕಾಲ ಕುಮಾರಸ್ವಾಮಿಯವರ ಜೊತೆ ಮಾತಾಡಿಲ್ಲ. ನಾಡಪ್ರಭು ಕೆಂಪೇಗೌಡರ ವೇದಿಕೆಯಲ್ಲಿ ಇಬ್ಬರೂ ಮಾತಾಡಬೇಕು. ಮತ್ತೆ ಒಳ್ಳೆಯ ಮಾತುಗಳನ್ನು ಆಡಬೇಕು. ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಬೇಕು. ವಿರುದ್ಧ ಅನ್ನುವಂತದ್ದು ಬರಬಾರದು ಎಂದು ವೇದಿಕೆಯಲ್ಲಿಯೇ ಆದೇಶಿಸಿದರು. ಕುಮಾರಸ್ವಾಮಿಯವರಿಗೆ ನೀವೇ ಜಿ.ಟಿ.ದೇವೇಗೌಡ ಅವರಿಗೆ ಶಾಲು, ಹಾರ ಹಾಕಬೇಕು ಅಂದರು. ಕುಮಾರಸ್ವಾಮಿಯವರೇ ನನಗೆ ಶಾಲು, ಹಾರ ಎಲ್ಲವನ್ನೂ ಹಾಕಿದರು' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News