ಮುರುಘಾ ಮಠದ ಶ್ರೀಗಳ ವಿರುದ್ಧದ ಆರೋಪ ಷಡ್ಯಂತ್ರದ ರೀತಿ ಇದೆ: ಸತೀಶ್ ಜಾರಕಿಹೊಳಿ

Update: 2022-08-28 16:38 GMT
ಸತೀಶ್ ಜಾರಕಿಹೊಳಿ

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣ ಮೇಲೆ ಹೊರಿಸಲಾಗಿರುವ ಲೈಂಗಿಕ ಕಿರುಕುಳ ಆರೋಪ ಷಡ್ಯಂತ್ರದಿಂದ ಕೂಡಿದ ರೀತಿ ಕಾಣುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಮೈಸೂರಿನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀ ಮೇಲಿನ ಆರೋಪ ಷಡ್ಯಂತ್ರದಿಂದ ಕೂಡಿದೆ ಎನಿಸುತ್ತಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು, ನಂತರ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನ ತೀರಾ ಅಗತ್ಯವಿದ್ದು, ಈ ಸಂಬಂಧ ಕಾಂಗ್ರೆಸ್ ಪಕ್ಷದಿಂದ ದೊಡ್ಡ ಮಟ್ಟದ ಹೋರಾಟ ಮಾಡಿ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು  ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಇದನ್ನೂ ಓದಿ: ಮುರುಘಾ ಶರಣರು ಆರೋಪ ಮುಕ್ತರಾಗಲಿದ್ದಾರೆ: ಬಿ.ಎಸ್. ಯಡಿಯೂರಪ್ಪ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News