×
Ad

ಗಣೇಶ ಹಬ್ಬ; ಕೋವಿಡ್ ಮಾರ್ಗಸೂಚಿ ಪಾಲಿಸಲು ರಾಜ್ಯ ಸರಕಾರ ಸುತ್ತೋಲೆ

Update: 2022-08-29 21:18 IST

ಬೆಂಗಳೂರು, ಆ.29: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ.31ರ ಗಣೇಶೋತ್ಸವದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಸರಕಾರವು ಸುತ್ತೋಲೆಯನ್ನು ಪ್ರಕಟಿಸಿದೆ.

ಹೊರಂಗಣ ಪ್ರದೇಶದಲ್ಲಿ ಆಚರಿಸಿದರೆ, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು. 1 ಮೀ. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸೂಚಿತ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಇಡಬೇಕು. ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಬೇಕು. ಕೋವಿಡ್ 19 ಲಸಿಕೆ ಪಡೆದಿರುವವರನ್ನು ಪ್ರತ್ಯೇಕಿಸಿ ಅಗತ್ಯ ಚಿಕಿತ್ಸೆ ಪಡೆಯಲು ರೆಫರ್ ಮಾಡಬೇಕು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಬೇಕು. ಹಾಗೆಯೇ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯವಾಗಿ ಹಾಕುವಂತೆ ತಿಳಿಸಿದೆ. 

ಸೆಪ್ಟೆಂಬರ್‍ವರೆಗೂ ಆಚರಿಸುವ ಹಬ್ಬಗಳಲ್ಲಿ ಜನರು ಗುಂಪು ಸೇರುವ ಸಾಧ್ಯತೆಗಳಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ. ಸೆ.8 ಓಣಂ, ಸೆ.9ರ ಅನಂತ ಪದ್ಮನಾಭ ವ್ರತ, ಸೆ.17ರ ವಿಶ್ವಕರ್ಮ ಜಯಂತಿ, ಸೆ.25ರ ಮಹಾಲಯ ಅಮಾವಾಸ್ಯೆಗೂ ಕೋವಿಡ್ ಮಾರ್ಗಸೂಚಿಗಳು ಅನ್ವಯವಾಗಲಿದೆ.

ಸರಕಾರಿ ಹಾಗೂ ಖಾಸಗಿ ಕಚೇರಿಗಳು, ವಸತಿ ಸಮುಚ್ಛಯಗಳ ಸಾಮಾನ್ಯ ಪ್ರದೇಶಗಳು, ಹೊಟೇಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್ (ಆಹಾರ ಸೇವಿಸುವ ಸಮಯವನ್ನು ಹೊರತುಪಡಿಸಿ) ಛತ್ರಗಳು, ಸಿನೆಮಾ ಹಾಲ್‍ಗಳು, ವಿದ್ಯಾ ಸಂಸ್ಥೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್, ಮೆಟ್ರೋ, ಟ್ರೈನ್, ಶಾಪಿಂಗ್ ಮಾಲ್ ಹಾಗೂ ಮಾರ್ಕೆಟ್‍ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News