ದೇಶದಿಂದ ಹೊರ ಹೋಗದಂತೆ ತಡೆಯಲ್ಪಟ್ಟ ವ್ಯಕ್ತಿಗೆ ಎಲ್‍ಒಸಿ ಪ್ರತಿ ನೀಡಬೇಕು: ಹೈಕೋರ್ಟ್

Update: 2022-08-30 12:47 GMT

ಬೆಂಗಳೂರು, ಆ.30: ವ್ಯಕ್ತಿಯೊಬ್ಬರಿಗೆ ದೇಶದಿಂದ ಹೊರ ಹೋಗದಂತೆ ತಡೆದಾಗ ಅವರಿಗೆ ಲುಕ್‍ಔಟ್ ಸುತ್ತೋಲೆಯ(ಎಲ್‍ಒಸಿ) ಪ್ರತಿ ನೀಡುವುದು ಸ್ವಾಭಾವಿಕ ನ್ಯಾಯ ತತ್ವ ಎಂದು ಹೈಕೋರ್ಟ್ (High court of karnataka) ಆದೇಶ ಮಾಡಿದೆ. 

ನಗರದ ಹರ್ಷವರ್ಧನರಾವ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಎಲ್‍ಒಸಿ ಹಿಂಪಡೆಯಲು ಅರ್ಜಿದಾರರು ಸಲ್ಲಿಸಿರುವ ಕೋರಿಕೆಯನ್ನು ಪರಿಗಣಿಸಿ, ಮುಂದಿನ ಆರು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಬೆಂಗಳೂರು ದಕ್ಷಿಣದ ಡಿಸಿಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ಕಾನೂನಿನ ಪ್ರಕಾರ ಅಧಿಕೃತ ಜ್ಞಾಪನ ಪತ್ರ ಮೂಲಕ ಜಾರಿಗೆ ತಂದಿರುವ ಎಲ್‍ಒಸಿ ನಿಯಮಾವಳಿಗಳು ಅರ್ಜಿದಾರರ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಅರ್ಥೈಸಿಕೊಂಡರೂ ಸಹ ಅರ್ಜಿದಾರರು ಕನಿಷ್ಠ ನಕಲು ಪ್ರತಿಗೆ ಅರ್ಹರಾಗುತ್ತಾರೆ ಎಂದು ನ್ಯಾಯಪೀಠವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News