×
Ad

ರೈತರ ಸಾಲ ಮರು ಹೊಂದಾಣಿಕೆಯಲ್ಲಿ ಅವ್ಯವಹಾರ: ರಮೇಶ್ ಬಾಬು ಆರೋಪ

Update: 2022-08-30 20:07 IST

ಬೆಂಗಳೂರು, ಆ.30: ರೈತರ ಸಾಲ ಮರು ಹೊಂದಾಣಿಕೆ ನವೀಕರಣ ದಂಧೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಾಲ ವಿತರಣೆ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾನೂನು ಸಚಿವರೇ ಸಾಲ ನವೀಕರಣಕ್ಕೆ ಲಂಚ ನೀಡಿರುವುದಾಗಿ ಹೇಳುತ್ತಾರೆ. ಲಂಚದ ಸರಕಾರ, ಮಂಚದ ಸರಕಾರ, ಭ್ರಷ್ಟರ ಸರಕಾರ, ರೈತ ವಿರೋಧಿ ಸರಕಾರ 'ಎಂದು ಟೀಕಿಸಿದ್ದಾರೆ.

ಈ ಸಂಬಂಧ ಕರ್ನಾಟಕ  ಕಾಂಗ್ರೆಸ್ ಟ್ವೀಟ್ ಮಾಡಿ,  'ನಿಮ್ಮ ಪ್ರಣಾಳಿಕೆಯಲ್ಲಿ ಸಹಕಾರಿ - ರಾಷ್ಟ್ರೀಕೃತ ಬ್ಯಾಂಕಿನ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಿರಿ. ಆದರೆ, ಡಬಲ್ ಎಂಜಿನ್ ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಾಗಲಿಲ್ಲ, ರೈತರ ಆದಾಯವೂ ದ್ವಿಗುಣವಾಗಲಿಲ್ಲ, ಆಗಿದ್ದು ಬೆಲೆ ಏರಿಕೆ ಮಾತ್ರ! ಇಂತಹ ಹೊಣೆಗೇಡಿತನ ಏಕೆ' ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News