ರಾಜ್ಯಾದಲ್ಲಿ ಮಂಗಳವಾರ 845 ಮಂದಿಗೆ ಕೊರೋನ ದೃಢ; ಐವರು ಮೃತ್ಯು

Update: 2022-08-30 15:23 GMT

ಬೆಂಗಳೂರು, ಆ.30: ರಾಜ್ಯದಲ್ಲಿ ಮಂಗಳವಾರ 845 ಹೊಸ ಕೊರೋನ (Coronavirus disease) ಪ್ರಕರಣಗಳು ದೃಢವಾಗಿವೆ. ಐವರು ಮೃತಪಟ್ಟಿದ್ದು, 1,389 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 40,50,915ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,199ಕ್ಕೆ ತಲುಪಿದೆ.        
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 6775ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.  

ಐವರು ಸಾವು: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಐವರು ಮೃತಪಟ್ಟಿದ್ದು, ಬಳ್ಳಾರಿ 1, ಮಂಡ್ಯ 1, ರಾಮನಗರ 1, ಶಿವಮೊಗ್ಗ 1, ಉಡುಪಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 589 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 4, ಬಳ್ಳಾರಿ 14, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 589, ಚಾಮರಾಜನಗರ 17, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 17, ದಕ್ಷಿಣಕನ್ನಡ 13, ದಾವಣಗೆರೆ 6, ಧಾರವಾಡ 12, ಹಾಸನ 14, ಹಾವೇರಿ 2, ಕಲಬುರಗಿ 2, ಕೊಡಗು 19, ಕೋಲಾರ 6, ಕೊಪ್ಪಳ 1, ಮಂಡ್ಯ 5, ಮೈಸೂರು 44, ರಾಯಚೂರು 5, ರಾಮನಗರ 9, ಶಿವಮೊಗ್ಗ 34, ತುಮಕೂರು 7, ಉಡುಪಿ 6, ಉತ್ತರಕನ್ನಡ 10, ವಿಜಯಪುರ ಜಿಲ್ಲೆಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. 

ರಾಜಧಾನಿಯಲ್ಲಿ 589 ಜನರಿಗೆ ಕೊರೋನ ದೃಢ

ರಾಜಧಾನಿಯಲ್ಲಿ ಮಂಗಳವಾರದಂದು 589 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 879 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 18,64,249 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,982 ಜನರು ಸೋಂಕಿಗೆ ಬಲಿಯಾಗಿದ್ದಾರೆ. 
ಕೋವಿಡ್ ನಿಗಧಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News