×
Ad

ಕಾಂಟ್ರಾಕ್ಟ್‌ಗಾಗಿ ನಾವು ಕೋಟಿಗಟ್ಟಲೆ ಕಮಿಷನ್‌ ನೀಡಿದ್ದೇವೆ: ವಿಧಾನ ಸೌಧದೆದುರು ನಿಂತು ಕಾಂಟ್ರಾಕ್ಟರ್‌ಗಳ ಆರೋಪ

Update: 2022-08-31 13:14 IST
Photo: Twitter Screengrab 

ಬೆಂಗಳೂರು:  ಕರ್ನಾಟದ ಬಿಜೆಪಿ ಸರಕಾರದ(Karnataka Goverment) ವಿರುದ್ಧದ  ಕಮಿಷನ್‌ ಆರೋಪ ಹಗರಣ ದಿನದಿಂದ ದಿನಕ್ಕೆ ಕಾವೇರುತ್ತಿದೆ.  ಸಚಿವರಾಗಿದ್ದ ಈಶ್ವರಪ್ಪರ ವಿರುದ್ಧ ಆರೋಪ ಮಾಡಿದ್ದ ಸಂತೋಷ್‌ ಬಳಿಕ ಆತ್ಮಹತ್ಯೆಗೈದಿದ್ದರು. ಆದರೂ ಈಶ್ವರಪ್ಪಗೆ(Eshwarappa) ಈ ಪ್ರಕರಣದಲ್ಲಿ ಕ್ಲೀನ್‌ ಚಿಟ್‌(Clean chit) ದೊರಕಿತ್ತು. ಇದೀಗ  ಕಮಿಷನ್‌ ದಂಧೆಯ ಕುರಿತು ಸ್ವತಃ ಕಾಂಟ್ರಾಕ್ಟರ್‌ ಗಳೇ ವಿಧಾನ ಸೌಧ ದ ಎದುರು ನಿಂತು ಇಂಗ್ಲೀಷ್ ಮಾಧ್ಯಮಗಳ ಮುಂದೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ndtv ಚಾನಲ್ ಜೊತೆ ಬೆಂಗಳೂರಿನ ವಿಧಾನಸೌಧದ(Vidhana Soudha) ಮುಂಭಾಗದಲ್ಲಿ ನಿಂತು ಸ್ವತಃ ಕಾಂಟ್ರಾಕ್ಟರ್‌ ಗಳೇ ಈ ಕುರಿತು ಅಳಲು ತೋಡಿಕೊಂಡಿದ್ದಾರೆ. "ಯಾವುದೇ ಗುತ್ತಿಗೆಯನ್ನು ನಾವು ಪಡೆಯಬೇಕಾದರೆ ಸರಕಾರಕ್ಕೆ ಕಮಿಷನ್‌ ನೀಡುವುದು ಕಡ್ಡಾಯವಾಗಿದೆ. ಒಂದು ಕೋಟಿ ರೂ.ಯ ಗುತ್ತಿಗೆ ಸಿಗಬೇಕಾದರೆ 10ಲಕ್ಷ ರೂ. ಮೊದಲೆ ಪಾವತಿಸಬೇಕಾಗುತ್ತದೆ. ಈ ಹಿಂದೆಯೂ ಇಂಥಹಾ ಕಮಿಷನ್‌ ದಂಧೆಗಳು ಇತ್ತು. ಆದರೆ 5%ನಷ್ಟು ನಾವು ನೀಡಬೇಕಾಗಿತ್ತು.  ಬಿಜೆಪಿ ಸರಕಾರ ಬಂದ ಬಳಿಕ ಈ ಕಾಟ ಇನ್ನೂ ಜಾಸ್ತಿಯಾಗಿದೆ. ಈಗ ನಾವೆಲ್ಲರೂ ಸೇರಿ 40%  ಕಮಿಷನ್‌ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದ್ದೇವೆ" ಎಂದು ಗುತ್ತಿಗೆದಾರರು ಹೇಳಿದ್ದಾರೆ.

"ಈಗಾಗಲೇ ನಾವು ಹಲವಾರು ಗುತ್ತಿಗೆಗಳನ್ನು ಪಡೆದುಕೊಂಡಿದ್ದೇವೆ. ಎಲ್ಲದ್ದಕ್ಕೂ ನಾವು ಹಣ ಪಾವತಿ ಮಾಡಿದ್ದೇವೆ. ಪ್ರತಿಯೊಂದು ಗುತ್ತಿಗೆಗೂ ಸರಕಾರಕ್ಕೆ 40% ಕಮಿಷನ್‌ ಪಾವತಿ ಮಾಡಿದ್ದೇವೆ. ಕಮಿಷನ್‌ ನೀಡದಿದ್ದರೆ ನಮಗೆ ಗುತ್ತಿಗೆ ಸಿಗುವುದಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ. ಬಿಜೆಪಿ ಸರಕಾರದ ಈ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕೆಂದು ಪ್ರಧಾನಿಯವರಿಗೆ ಮತ್ತೆ ಗುತ್ತಿಗೆದಾರರು ಪತ್ರ ಬರೆದಿದ್ದು ಇತ್ತೀಚಿಗೆ ಸುದ್ದಿಯಾಗಿತ್ತು.

ರಾಜಕೀಯ ಪ್ರಭಾವವಿದ್ದರೆ ಯಾವುದೇ ರೀತಿಯ ಆರೋಪಗಳನ್ನೂ ಮೂಲೆಗೆಸಯಬಹುದು ಎಂಬುವುದಕ್ಕೆ ಈಶ್ವರಪ್ಪ ಮತ್ತು ಸಂತೋಷ್‌ ನಡುವಿನ ಪ್ರಕರಣ ಉದಾಹರಣೆ ಎಂದು ಟ್ವಿಟರ್‌ ನಲ್ಲಿ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. "ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಬದಿಗೆ ಸರಿಸುವ ಪ್ರತ್ನವೆಂಬಂತೆ ಸದ್ಯ ಮುಸ್ಲಿಮರನ್ನು ಗುರಿಪಡಿಸಿ ರಾಜ್ಯದಲ್ಲಿ ಕೋಮು ಗಲಭೆ ಎಬ್ಬಿಸಲಾಗುತ್ತಿದೆ" ಎಂದು ಇನ್ನೋರ್ವ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News