ಚಿಂಚೋಳಿ | ತಾಲೂಕಿನ ಹಲವೆಡೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ

Update: 2022-09-01 04:09 GMT

ಕಲಬುರಗಿ, ಸೆ.1: ಚಿಂಚೋಳಿ ತಾಲೂಕಿನ ಐದಾರು ಗ್ರಾಮಗಳಲ್ಲಿ ಕಳೆದ ರಾತ್ರಿ ಜೊರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಗ್ರಾಮಸ್ಥರು ತಿಳಿಸಿದ್ದಾರೆ.

ತಾಲೂಕಿನ ದಸ್ತಾಪುರ, ಚಿಮ್ಮಾಈದಲಾಯಿ, ಅಣವಾರ, ಗೌಡನಹಳ್ಳಿ, ನೀಮಾಹೊಸಹಳ್ಳಿ ಹಾಗೂ ಇಂದ್ರಪಾಡ ಹೊಸಳ್ಳಿ ಗ್ರಾಮಗಳಲ್ಲಿ ಬುಧವಾರ ರಾತ್ರಿ‌ 10:58ಕ್ಕೆ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದೆ. ಸುಮಾರು 8- 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ನಾವು ತಕ್ಷಣ ನಾವು‌ ಮನೆಗಳಿಂದ ಹೊರಗಡೆ ಓಡಿ‌ ಬಂದಿದ್ದೇವೆ ಎಂದು ಆತಂಕಿತ  ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

 ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಭೂಮಿಯಿಂದ ಈ ರೀತಿಯ ಸದ್ದು ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆನಡ: ಒಂದೂವರೆ ವರ್ಷದ ಮಗುವಿನ ಸಾವಿನ  ಪ್ರಕರಣ, ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆ ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News