×
Ad

ಮುರಘಾ ಶ್ರೀ ಬಂಧನ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ: ಸಚಿವ ಸೋಮಣ್ಣ

Update: 2022-09-01 19:03 IST

ಚಾಮರಾಜನಗರ, ಸೆ.1: 'ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವ ಚಿತ್ರದುರ್ಗ ಮಠಾಧಿಪತಿ ಮುರುಘ ಶ್ರೀ ಪ್ರಕರಣದಲ್ಲಿ ಕೆಲವು ವಿಚಾರಗಳಲ್ಲಿ ಏನಾಗಿದೆ ಎತ್ತ ಆಗಿದೆ ಎಂಬುದರ ಕುರಿತು ಮಾಹಿತಿ ಇದೆ.  ಈ ರೀತಿಯ ಪ್ರಕರಣ ನಡೆದಿರುವುದು ದುರಂತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಚಾಮರಾಜನಗರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, 'ಚಿತ್ರದುರ್ಗ ಮುರುಘ ಶ್ರೀ ಗಳ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಮುಖ್ಯಮಂತ್ರಿಗಳು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ' ಎಂದು ಹೇಳಿದರು.

ಇದನ್ನೂ ಓದಿ:  ಮುರುಘಾ ಶ್ರೀ ವಿರುದ್ಧ ಪೊಕ್ಸೊ ಪ್ರಕರಣ: ಕೋರ್ಟ್ ನಿಗಾದಲ್ಲಿ ತನಿಖೆಗೆ ವಕೀಲರ ಒತ್ತಾಯ

'ಈಗಾಗಲೇ ನ್ಯಾಯಾಲಯದಲ್ಲಿ ಸಂತ್ರಸ್ಥ ಬಾಲಕಿಯರ ಹೇಳಿಕೆ ನೀಡಿದ್ದಾರೆ, ಪ್ರಕರಣ ಕೋರ್ಟ್ ಅಂಗಳದಲ್ಲಿರುವಾಗ ಮಾತಾಡೊದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ ಅದಕ್ಕೆ ತಲೆ ಬಾಗೋಣ ನಾವು ಮದ್ಯಸ್ತಿಕೆ ವಹಿಸಬಾರದು ಎಂದು ಹೇಳಿ, ಸಮಾಜದಲ್ಲಿ ಎಲ್ಲವೂ ಸರಿ ಇದೆ ಸರಿ ಇಲ್ಲ ಎಂದು ಹೇಳುವಷ್ಟು ನೀಚ ನಾನಲ್ಲ ಎಂದು ಮಾರ್ಮಿಕವಾಗಿ ನುಡಿದ ಸೋಮಣ್ಣ, ಶ್ರೀಗಳ ಬಂಧನ ವಿಚಾರವಾಗಿ ಸರ್ಕಾರ ಹಸ್ತ ಕ್ಷೇಪ ಮಾಡ್ತಿಲ್ಲ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News