×
Ad

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

Update: 2022-09-01 20:43 IST

ಹುಬ್ಬಳ್ಳಿ, ಸೆ.1: ಹುಬ್ಬಳ್ಳಿ ಈದ್ಗಾ (Hubballi's Idgah Maidan)  ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಈ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮ್ ಸಂಸ್ಥೆಯು ಸುಪ್ರೀಂಕೋರ್ಟ್‍ಗೆ (Supreme Court of India) ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. 

ಬೆಂಗಳೂರಿನ ಈದ್ಗಾ ಮೈದಾನಕ್ಕೆ ನೀಡಿರುವ ಆದೇಶವನ್ನೇ ತಮಗೂ ಅನ್ವಯ ಮಾಡುವಂತೆ ಅದು ಅರ್ಜಿಯಲ್ಲಿ ಕೋರಿಕೊಂಡಿದೆ. ಹೀಗಾಗಿ, ಸುಪ್ರೀಂಕೋರ್ಟ್ ಯಾವ ನಿಲುವು ತಾಳುತ್ತದೆಯೋ ಕಾದು ನೋಡಬೇಕಿದೆ.
 
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪಿಸಲು ಹೈಕೋರ್ಟ್ ಅನುಮತಿ ನೀಡಿದಬೆನ್ನಲ್ಲೇ ಹಿಂದು ಸಂಘಟನೆಗಳು ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ, ಮುಂದಿನ ವರ್ಷವೂ ಗಣೇಶಮೂರ್ತಿಯನ್ನು ಕೂರಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News