×
Ad

ಪ್ರಧಾನಿ ಮೋದಿ ಆಡಿದ್ದ ಮಾತುಗಳನ್ನು ಕನ್ನಡಿಗರು ಇನ್ನೂ ಮರೆತಿಲ್ಲ: ಕಾಂಗ್ರೆಸ್

Update: 2022-09-02 11:47 IST

ಬೆಂಗಳೂರು: 'ಚುನಾವಣೆಗೂ ಮೊದಲು ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು. ಬೆಂಗಳೂರು ಸೇರಿದಂತೆ 7 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ, 836 ಕೋಟಿ ಕೊಡುತ್ತೇವೆ ಎಂದಿದ್ದರು. ಈಗ ಸ್ಮಾರ್ಟ್ ಸಿಟಿ ಬಿಡಿ, ಸಿಟಿಯೂ ಇಲ್ಲದ ಹಾಗೆ ಮುಳುಗಿಸಿದೆ ಬಿಜೆಪಿ. ನೀಡಿದ ಭರವಸೆಗಳು ಏನಾದವು?' ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕನ್ನಡಿಗರು ನೀವು ಆಡಿದ್ದ ಮಾತುಗಳನ್ನು ಇನ್ನೂ ಮರೆತಿಲ್ಲ. ಕೌಶಲ್ಯಾಭಿವೃದ್ಧಿ ಮಾಡುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದಿರಿ, ಆದರೆ ಈಗ ಸರ್ಕಾರಿ ಉದ್ಯೋಗಗಳು ಮಾರಾಟವಾಗುತ್ತಿವೆ, ನಿರುದ್ಯೋಗ ಮುಗಿಲು ಮುಟ್ಟಿದೆ. ನಿಮ್ಮ ಭರವಸೆಗಳು ಮಣ್ಣುಪಾಲಾಗಿದ್ದೇಕೆ?' ಎಂದು ಪ್ರಶ್ನಿಸಿದೆ. 

'ಪ್ರಧಾನಿ ಅವರ ಮೋಸಗಳ ಪಟ್ಟಿ ಮಾಡಿದರೆ ಆಕಾಶಕ್ಕೆ ಏಣಿಯಾಗುವಷ್ಟಿದೆ! ಗ್ಯಾಸ್ ಸಿಲಿಂಡರ್ ಸಂಪರ್ಕದ ಬಗ್ಗೆ ಟೆಲಿಪ್ರಾಂಪ್ಟರ್ ಓದಿಕೊಂಡು ಭಾಷಣ ಮಾಡಿದ್ದ ಪ್ರಧಾನಿ ನಂತರ ಅಡುಗೆ ಅನಿಲದ ಸಬ್ಸಿಡಿ ನಿಲ್ಲಿಸಿ, ಬೆಲೆ ಏರಿಸಿ ಬಡವರ ಮನೆಯ ಒಲೆಗಳನ್ನು ಆರಿಸಿದರು. ಗ್ಯಾಸ್ ಬೆಲೆ ಏರಿಕೆಯ ಕುರಿತು ಕರ್ನಾಟಕದ ತಾಯಂದಿರ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯಾ ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News