×
Ad

ವೇದಿಕೆಯಲ್ಲಿದ್ದರೂ ಪ್ರಧಾನಿ ಮೋದಿ ನಳಿನ್ ಕುಮಾರ್ ಕಟೀಲ್‌, ಬಿಎಸ್ ವೈ ಹೆಸರು ಹೇಳದಿರುವುದು ಏಕೆ: ಕಾಂಗ್ರೆಸ್ ಪ್ರಶ್ನೆ

Update: 2022-09-02 20:55 IST

ಮಂಗಳೂರು: ಕೂಳೂರು ಸಮೀಪದ ಗೋಲ್ಡ್ ಪಿಂಚ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಅವರ ಹೆಸರನ್ನು ಮೋದಿಯವರು ಹೇಳಲಿಲ್ಲ. ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ , 'ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡದ ಸಂಸದ, ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್‌ರ ಹೆಸರು ಹೇಳದಿರುವುದು ಏಕೆ?, ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ? , ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ? ,ಸಂಸತ್ ಅಭ್ಯರ್ಥಿ & ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ?' ಎಂದು ಪ್ರಶ್ನೆ ಮಾಡಿದೆ. 

'BSY ಅವರೀಗ ಬಿಜೆಪಿಯಲ್ಲಿ ಚಲಾವಣೆ ಇಲ್ಲದ ನಾಣ್ಯ. BSY ವೇದಿಕೆಯಲ್ಲಿದ್ದರೂ ಮೋದಿಯವರು ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ ಅವರು ಒಡೆದ ಮಡಕೆಯಂತಾದರೇ ? ಅಡ್ವಾಣಿಯನ್ನೇ ಮುಕ್ತ ಮಾಡಿರುವಾಗ #BSYmuktaBJP ಮಾಡುವುದು ಮೋದಿಯವರಿಗೆ ಯಾವ ಲೆಕ್ಕ! ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ.'' ಎಂದು ಕಾಂಗ್ರೆಸ್ ಟ್ವೀಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News