ಕರ್ತವ್ಯಲೋಪ: ಕಳಸ ಉಪವಲಯ ಅರಣ್ಯಾಧಿಕಾರಿ ಅಮಾನತು

Update: 2022-09-03 05:57 GMT

ಚಿಕ್ಕಮಗಳೂರು, ಸೆ.3: ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕೊಪ್ಪ ಅರಣ್ಯ ವಿಭಾಗದ ಕಳಸ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ ಕೆ.ನಾಗರಾಜ್ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.

ಕಳಸ ಅರಣ್ಯ ವಲಯದ ಕಳಕೋಡು ಗ್ರಾಮದ ಸ.ನಂ.80ರ ಅಧಿಸೂಚಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಒತ್ತುವರಿ ಜಾಗದಲ್ಲಿದ್ದ ಕಾಡು ಜಾತಿ ಮರಗಳ ಕಡಿತ, ಯಡೂರು ಗ್ರಾಮದ ಸ.ನಂ.50ರಲ್ಲಿ ಅಕೇಶಿಯಾ ನೆಡುತೋಪಿನಲ್ಲಿದ್ದ 116 ಮರಗಳ ಕಡಿತ, ಮಾವಿನಕೆರೆ ಗ್ರಾಮದ ಸ.ನಂ.945ರಲ್ಲಿನ ಸಾಮಾಜಿಕ ಅರಣ್ಯದಲ್ಲಿ ಬೆಳೆದಿದ್ದ ಅಕೇಶಿಯಾ ನೆಡುತೋಪಿನಲ್ಲಿ 29 ಗಾಳಿ ಮರಗಳ ಕಡಿತ, ಸಂಸೆ ಗ್ರಾಪಂ ವ್ಯಾಪ್ತಿಯ ಸ.ನಂ.265ರಲ್ಲಿನ ಡೀಮ್ಡ್ ಅರಣ್ಯದಲ್ಲಿ ಜೆಸಿಬಿಯಿಂದ ಮಣ್ಣು ತೆಗೆದು ಅಕ್ರಮ ಸಾಗಣೆ, ಮಾವಿನಕೆರೆ ಸ.ನಂ.641ರಲ್ಲಿನ ಸೆಕ್ಷನ್ 4 ಅಧಿಸೂಚಿತ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಕಳಸ ಅರಣ್ಯ ವಲಯ ಕಚೇರಿಯ ಗೋದಾಮಿನಲ್ಲಿದ್ದ 197 ಕೆಜಿ ಶ್ರೀಗಂಧ ಮರಗಳ ತುಂಡುಗಳ ಕಳವು, ಶ್ರೀಗಂಧದ ದಾಸ್ತಾನಿನಲ್ಲಿ 336 ಕೆಜಿ ಕಡಿಮೆ ಇರುವ ಬಗ್ಗೆ ಸುಳ್ಳು ವರದಿ ನೀಡಿರುವುದು ಸೇರಿದಂತೆ ಅರಣ್ಯ ಇಲಾಖೆಯ ಪ್ರಕರಣವೊಂದರಲ್ಲಿ ಅಪರಾಧಿಗೆ ಸಂಬಂಧಿಸಿದ ಎಫ್‍ಐಆರ್ ತಿದ್ದಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪಗಳು ಸಾಭೀತಾಗಿರುವ ಹಿನ್ನೆಲೆಯಲ್ಲಿ ನಾಗರಾಜ್ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News