ಶಿವಮೊಗ್ಗ: ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾಕ್ಕೆ ಚಾಲನೆ

Update: 2022-09-03 08:56 GMT

ಶಿವಮೊಗ್ಗ: ನಗರದ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ನಗರದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಎಂಬ ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ನಡೆಯಿತು.

ನಗರದ ಸಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗ ಜಾಥಾಕ್ಕೆ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ‌ ಚಾಲನೆ‌‌ ನೀಡಿದರು.

ಸರ್ವಧರ್ಮಗಳ ಸ್ವಾಮೀಜಿಗಳ‌‌ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.60 ಕ್ಕೂ ಹೆಚ್ಚು ಸಂಘ- ಸಂಸ್ಥೆಗಳು ಜಾಥಾದಲ್ಲಿ ಪಾಲ್ಗೊಂಡವು.

 ಜಾಥಾದಲ್ಲಿ ಭಾಗಹಿಸಿದ್ದವರು ಸ್ನೇಹ, ಪ್ರೀತಿ, ಶಾಂತಿ  ನಮ್ಮುಸಿರು, ನಮಗೆ ಶಾಂತಿ‌ ಕೊಡಿ, ನಮ್ಮ ಎದೆಯೊಳಗೆ ಪ್ರೀತಿ ತುಂಬಿ ಭಯವಲ್ಲ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿದರು.ಎಲ್ಲಾ ಧರ್ಮೀಯರು ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದರು.

ಜಾಥಾದಲ್ಲಿ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ,ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ,ಜಾಮೀಯ ಮಸೀದಿಯ ಮೌಲ್ವಿ ಮುಫ್ತಿ ಅಖ್ವಿಲ್ ರಝಾ, ಮೌಲಾನಾ ಶಾಹುಲ್ ಹಮೀದ್, ಕ್ರೈಸ್ತ  ಧರ್ಮ ಗುರು ಡಾ.ಎಸ್.ಜೆ ಪ್ರಾನ್ಸಿಸ್ ಸೆರಾವೋ, ಸೇಕ್ರೆಡ್ ಹಾರ್ಟ್ ಫಾದರ್ ಸ್ಟ್ಯಾನಿ ,ಡಾ.ಕ್ಲಿಫರ್ಡ್ ಪಿಂಟೋ ಸೇರಿದಂತೆ ಹಲವಾರು ಧರ್ಮ ಗುರುಗಳು ಭಾಗವಹಿಸುವ ಮೂಲಕ ಸಮನ್ವಯತೆ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಧನಂಜಯ ಸರ್ಜಿ, ವಕೀಲರಾದ ಕೆ.ಪಿ ಶ್ರೀಪಾಲ್, ಡಿಎಸ್ ಎಸ್ ಸಂಘಟನೆಯ ರಾಜ್ಯ ಸಂಚಾಲಕ  ಎಂ.ಗುರುಮೂರ್ತಿ,ಜನಶಕ್ತಿ ಸಂಘನೆಯ ಕೆ.ಎಲ್ ಆಶೋಕ್,ಅನನ್ಯ ಶಿವು,ರಾಜ್ಯ ರೈತ ಸಂಘದ ಮುಖಂಡ ಕೆ.ಟಿ ಗಂಗಾಧರ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ಅಲ್ತಾಪ್ ಫರ್ವಿಜ್,ಜಿ.ಡಿ ಮಂಜುನಾಥ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News