ಮೈಸೂರು ದಸರಾ ಕವಿಗೋಷ್ಠಿ: ಡಾ.ಚಂದ್ರಶೇಖರ ಕಂಬಾರ ಉದ್ಘಾಟನೆ, ಡಾ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ

Update: 2022-09-03 14:01 GMT

ಮೈಸೂರು,ಸೆ.3: ನಾಡಹಬ್ಬ ಮೈಸೂರುದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಪ್ರಧಾನ ಕವಿಗೋಷ್ಠಿ ಅ.3 ರಂದು ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದು,  ಕವಿ ಡಾ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಅವರು, ಜಗನ್ಮೋಹನ ಅರಮನೆ ಸಭಾಂಗಣ ಅಥವಾ ಮೈಸೂರು ವಿ.ವಿ. ಸೆನೆಟ್ ಸಭಾಂಗಣದಲ್ಲಿ ಈ ಬಾರಿಯಕವಿಗೋಷ್ಠಿ ನಡೆಸಲಾಗುವುದು ಕನ್ನಡದೊಂದಿಗೆ ತುಳು, ಕೊಡವ, ಅರೆಭಾಷೆ, ಸಂಸ್ಕೃತ, ಕೊಂಕಣಿ ಮೊದಲಾದ ಭಾಷೆಗಳ 40 ಕವಿಗಳು ಕವನವನ್ನು ವಾಚಿಸಲಿದ್ದಾರೆ.ಇದು ಬಹುಭಾಷಾ ಕವಿಗೋಷ್ಠಿಯಾಗಿರಲಿದೆ ಎಂದು ಹೇಳಿದರು.

ಪ್ರಸಿದ್ಧ ಕವಿಗಳನ್ನು ನಾವೇ ಆಹ್ವಾನಿಸಲಿದ್ದೇವೆ. ರಾಜ್ಯದಎಲ್ಲಾ ಭಾಗದವರಿಗೂ ಪ್ರಾತಿನಿಧ್ಯಇರಲಿದೆ.ಕವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.ವ್ಯವಸ್ಥಿತ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ರೂ. 25 ಲಕ್ಷ ಅನುದಾನ ಕೋರಲಾಗಿದೆ ಎಂದು ಹೇಳಿದದರು.

ಈ ಬಾರಿ ಕವಿಗೋಷ್ಠಿಗಳೊಂದಿಗೆ ದಸರಾಕಾವ್ಯ ಸಂಭ್ರಮ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.ಸೆ.28 ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ನಡೆಯಲಿದ್ದು, ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‍ ಉದ್ಘಾಟಿಸಲಿದ್ದಾರೆ.ಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ಹಾಸ್ಯ ಕವಿಗೋಷ್ಠಿ ಜರುಗಲಿದೆ.ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಲಿದ್ದಾರೆ. ಬಿ.ಆರ್.ಲಕ್ಷ್ಮಣ್‍ರಾವ್, ದುಂಡಿರಾಜ್, ಈರಪ್ಪ ಕಂಬಳ್ಳಿ ಸೇರಿದಂತೆ 20 ಮಂದಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಮಧ್ಯಾಹ್ನ 2.30ಕ್ಕೆ ಜನಪದಕಾವ್ಯ ಸಂಭ್ರಮ ನಡೆಯಲಿದೆ.ಡಾ.ಪಿ.ಕೆ.ರಾಜಶೇಖರ್ ಮತ್ತು ತಂಡದವರು ಹಾಗೂ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಜನಪದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. 

ಸೆ.30 ರಂದು ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯರಾಣಿ ಬಹದ್ದೂರ್ ಸಭಾಂಗಣದಲ್ಲಿಯುವ ಕವಿಗೋಷ್ಠಿ ನಡೆಯಲಿದೆ.ಇದರಲ್ಲಿ 40 ಕವಿಗಳು ಭಾಗವಹಿಸಲಿದ್ದಾರೆ.ಆ ಸಭಾಂಗಣದಲ್ಲೇ ಅ.1 ರಂದು ಬೆಳಿಗ್ಗೆ 10.30ಕ್ಕೆ ಚಿಗುರು ಕವಿಗೋಷ್ಠಿ ನಡೆಸಲಾಗುತ್ತದೆ.40  ಉದಯೋನ್ಮುಖ ಕವಿಗಳು ಮತ್ತು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದುಎಂದು ತಿಳಿಸಿದರು.

ಉಪಸಮಿತಿಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, ಪ್ರಧಾನ ಕವಿಗೋಷ್ಠಿಗೆ ಖ್ಯಾತನಾಮರನ್ನು ನಾವೇ ಆಹ್ವಾನಿಸುತ್ತೇವೆ. ಚಿಗುರು ಮತ್ತು ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಉಳ್ಳವರು ಸಮಿತಿಯನ್ನು ಸಂಪರ್ಕಿಸಬಹುದು.ದೂ.9964177512. ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಅವಕಾಶ ಕಲ್ಪಿಸಲಾಗುತ್ತದೆಎಂದರು.

ಪ್ರಧಾನ ಕವಿಗೋಷ್ಠಿಯ ಉದ್ಘಾಟಕರು ಮತ್ತು ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರುವುದು ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News