ಕೊರೋನ ಸಾವುಗಳಿಗೆ ಕನಿಷ್ಠ ವಿಷಾದವೂ ವ್ಯಕ್ತಪಡಿಸದ ಕೇಂದ್ರ ಸರಕಾರ: ಹರಿಪ್ರಸಾದ್ ಆಕ್ರೋಶ

Update: 2022-09-14 05:31 GMT

ಬೆಂಗಳೂರು, ಸೆ.3: 'ಭಾರತೀಯ ಪ್ರವಾಸಿ ಗರ್ಭಿಣಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ನೈತಿಕ ಹೊಣೆ ಹೊತ್ತು ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ. ಆದರೆ, ಕೊರೋನಗೆ ಮೋದಿ ಸರಕಾರದ ವೈಫಲ್ಯತೆಯಿಂದ ಲಕ್ಷಾಂತರ ಜನರು ಸಾವೀಗಿಡಾದರೂ ಒಬ್ಬೇ ಒಬ್ಬ ಕೇಂದ್ರದ ಮಂತ್ರಿ ರಾಜೀನಾಮೆ ನೀಡಲಿಲ್ಲ. ಕನಿಷ್ಠ ವಿಷಾದವೂ ವ್ಯಕ್ತಪಡಿಸಲಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಆಯುಷ್ಮಾನ್ ಕ್ಲಿನಿಕ್ ಗಳನ್ನ ಸ್ಥಾಪಿಸುವುದಾಗಿ ಕೊಟ್ಟ ವಚನವನ್ನೇ ಬೊಮ್ಮಾಯಿ ಸರ್ಕಾರ ಮರೆತಿದೆ. ಭ್ರಷ್ಟಾಚಾರದಿಂದ ಆರೋಗ್ಯ ಕ್ಷೇತ್ರವನ್ನ ದಿವಾಳಿ ಮಾಡಿದ ಬಿಜೆಪಿ ಸರ್ಕಾರ, ಕೊರೊನಾ ವೈರಸ್ ಸೃಷ್ಟಿಸಿದ ಭೀಕರ ಮಾರಣಹೋಮದಿಂದಲೂ ಪಾಠ ಕಲಿಯಲೇ ಇಲ್ಲ. ಅವಧಿ ಮುಗಿಯುವುದರೊಳಗೆ ಕೊಟ್ಟ ಮಾತು ಉಳಿಸಿಕೊಳ್ಳಿವಿರಾ?' ಎಂದು ಮುಖ್ಯಮಂತ್ರಿ ಬವಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News